ಸಿಂಧನೂರು : ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡಸಿ ಜುಲೈ 3, 2026 ಶುಕ್ರವಾರ ಫ್ರೀಡಂ ಪಾರ್ಕ್ ಬೆಂಗಳೂರು ನಲ್ಲಿ ರಾಜ್ಯ ಸಮಿತಿ ವತಿಯಿಂದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲ್ಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ ಚಿನ್ನಪ್ಪ
ಹೆಡಿಗಿಬಾಳ ತಿಳಿಸಿದರು.
ನಂತರ ಮಾತನಾಡಿದ ಅವರು ದಲಿತರ ಆರ್ಥಿಕ- ಸಾಮಾಜಿಕ ಸಬಲೀಕರಣಕ್ಕೆ ಸರ್ಕಾರ ವಿಶೇಷ ಘಟಕ ಯೋಜನೆ (ಎಸ್ಸಿ , ಎಸ್‌ಪಿ, -ಟಿಎಸ್‌ಪಿ, ಕಾಯ್ದೆ ಮೂಲಕ 2013ರಂದು ಜಾರಿಗೆ ತಂದು ಸುಮಾರು 3 ಲಕ್ಷಕ್ಕೂ ಮೇಲ್ಪಟ್ಟು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಒದಗಿಸಿದೆ.
ಈ ಅನುದಾನದಿಂದ ಎಷ್ಟು ಪರಿಶಿಷ್ಟರ ಕುಟುಂಬಗಳು ಬಡತನ ರೇಖೆಯಿಂದ ಹೊರ ಬಂದಿವೆ ಇನ್ನು ಭೂಮಿ, ವಸತಿ ಸರ್ಕಾರಿ ಉದ್ಯೋಗ ಬ್ಯಾಕ್ ಲಾಗ್ ಹುದ್ದೆಗಳು ಭರ್ತಿ, ಕಡ್ಡಾಯ ಶಿಕ್ಷಣ ಮುಂತಾದವು ನೆನೆಗುದಿಗೆ ಬಿದ್ದಿವೆ, ಶೋಷಿತ ಸಮುದಾಯಗಳ ಮೇಲೆ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿ ಜುಲೈ 3, 2026ರಂದು ದಲಿತರ ಸಮಗ್ರ ಸಬಲೀಕರಣಕ್ಕಾಗಿ ಅನಿರ್ದಿಷ್ಟ ಪ್ರತಿಭಟನೆ ಸಮಾವೇಶವನ್ನು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ ಸರ್ಕಾರದ ನಿಷ್ಕಾಳಜಿಯನ್ನು ವಿರೋಧಿಸಲು ಸಮರೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕರ್ತರು ಬುದ್ದಿಜೀವಿಗಳು ಸಾಮಾಜಿಕ ಹೋರಾಟಗಾರರು ಈ ಒಂದು ಸಮಾವೇಶದಲ್ಲಿ ಭಾಗವಹಿಸಲು ಕಲ್ಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ ಚಿನ್ನಪ್ಪ ಹೆಡಗಿಬಾಳ ಕರೆ ನೀಡಿದರು.
ಈ ಸಂದರ್ಭದಲ್ಲಿ ಮೈಬೂಬ್ ಪಾಟೀಲ್ ಮುದ್ದಾಪುರ, ಪಾಸ್ಕರ್, ದೇಶಪ್ಪ ಪಾಂಡುರಂಗ ಕ್ಯಾಂಪ್, ವಿಜಯಕುಮಾರ್, ಪ್ರವೀಣ್ ಕುಮಾರ್ ಇನ್ನಿತರರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ


