LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆರೆಕೋಡಿ ಬಳಿ ಅಪಘಾತ : ಓರ್ವ ವ್ಯಕ್ತಿ ಸಾವು

Advertisement

ತುರುವೇಕೆರೆ : ಪಟ್ಟಣದ ಕೆರೆ ಕೋಡಿ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. 

ಮೃತ ವ್ಯಕ್ತಿಯನ್ನು ತಾಲೂಕಿನ ಪುರ ಗ್ರಾಮದ ದೇವರಾಜ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ದೇವರಾಜ್ ಶ್ರಾವಣ ಮಾಸದ ಪೂಜೆಗಾಗಿ ತುರುವೇಕೆರೆಯಿಂದ ಗ್ರಾಮಕ್ಕೆ ಪೂಜಾ ಸಾಮಾನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಬಾಣಸಂದ್ರದ ಕಡೆಯಿಂದ ಬರುತ್ತಿದ್ದ ವಾಹನವನ್ನು ಹಿಮ್ಮೆಟ್ಟಿಸಿ (ಓವರ್ ಟೇಕ್) ಮಾಡಿಕೊಂಡು ಬಂದ ದ್ವಿಚಕ್ರ ವಾಹನವು ದೇವರಾಜ್ ಅವರ ವಾಹನಕ್ಕೆ ನೇರಾನೇರ ಢಿಕ್ಕಿ ಹೊಡೆದ ಪರಿಣಾಮ ದೇವರಾಜ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 

news_1788006015_0_467.webp

 

news_1788006015_1_642.webp

 

ಬಾಣಸಂದ್ರದ ಕಡೆಯಿಂದ ಬಂದ ದ್ವಿಚಿಕ್ರ ವಾಹನದಲ್ಲಿ ಮೂವರು ಇದ್ದು ಅವರೆಲ್ಲರಿಗೂ ತೀವ್ರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತ ದೇವರಾಜ್ ಅವರ ಮರಣೋತ್ತರ ಪರೀಕ್ಷೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಮೂರ್ತಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೈರ್ ಬ್ಲಾಸ್ಟ್, ಕಾರಿನ ಮೇಲೆ ಟ್ರಕ್‌ ಪಲ್ಟಿ : ತಪ್ಪಿದ ಭಾರೀ ಅನಾಹುತಹುಕ್ಕೇರಿ ತಾಲೂಕು ಪಡಿತರ ಚೀಟಿ ಸರ್ವೇ ಕಾರ್ಯದ ತಾಂತ್ರಿಕ ತೊಂದರೆ ನಿವಾರಣೆಗೆ ಆಗ್ರಹಬೆಳಗಾವಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸದ ಸರ್ಕಾರಅಮೆರಿಕದಲ್ಲಿ ಮಗಳ ಮದುವೆ : ಆನ್‌ಲೈನ್‌ನಲ್ಲಿ ಅಕ್ಷತೆ ಹಾಕಿ ಆಶೀರ್ವದಿಸಿದ ಪೋಷಕರುರೈಲು ಡಿಕ್ಕಿಯಾಗಿ ವೃದ್ದೆ, ಇಬ್ಬರು ಮೊಮ್ಮಕ್ಕಳು ದುರ್ಮರಣಸೆಪ್ಟೆಂಬರ್ 1ರಿಂದ 10ರವರೆಗೆ ಬಿಜೆಪಿ ಬಳ್ಳಾರಿ ಪಾದಯಾತ್ರೆ: ರೂಟ್ ಮ್ಯಾಪ್ ರೆಡಿ9 ಗಂಟೆಯಲ್ಲಿ 40 ಎಕರೆ ಎಡೆ ಹೊಡೆದ ವಿಜಯಪುರದ ಎತ್ತುಗಳುಪ್ರೇಯಿಸಿ ಮೊಬೈಲ್‌ ನಂಬರ್‌ ಬ್ಲಾಕ್‌ಗೆ ಹಾಕಿದ್ದಕ್ಕೆ ಟವರ್ ಕುಳಿತ ಯುವಕ : ಪ್ರೇಯಸಿ ಬರುತ್ತಿದ್ದಂತೆ ಇಳಿದಅನುಮಾನಾಸ್ಪದವಾಗಿ ಯುವಕ ಸಾವು : ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು ಪತ್ತೆ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಇಂಗ್ಲೆAಡ್