ಬಾಗಲಕೋಟೆ : ಜಿಲ್ಲೆಯ ಇಲಕಲ ಪಟ್ಟಣದ ಹತ್ತಿರ ಚಲಿಸುತ್ತಿದ್ದಾಗ ಟೈರ್ ದಿಢೀರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸರ್ವಿಸ್ ರಸ್ತೆಗೆ ನುಗ್ಗಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಇಳಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಗ್ರಹ ಡಾಬಾ ಬಳಿ ನಡೆದಿದೆ.
ಆಗಸ್ಟ್ 29ರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಕೊಪ್ಪಳದ ಕುಷ್ಟಗಿ ಮಾರ್ಗವಾಗಿ ಹೊರಟಿದ್ದ ಗುಜರಾತ್ ಮೂಲದ ಲಾರಿಯ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಟ್ರಕ್ ಸರ್ವಿಸ್ ರಸ್ತೆಯಲ್ಲಿದ್ದ ಹನಮಸಾಗರ ಪಟ್ಟಣದ ಕಾರಿನ ಮೇಲೆ ಉರುಳಿಬಿದ್ದಿದೆ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿ : ಬಸವರಾಜ ಪೂಜಾರಿ


