Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ 

ಚರ್ಚೆಗೆ ಆಹ್ವಾನಿಸಿ ಕಚೇರಿಯಲ್ಲಿ ಇಲ್ಲದ್ದಕ್ಕೆ ಆಕ್ರೋಶ

Advertisement

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಪ್ರಮುಖ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಸಮತಾ ಸೇನಾ ನೇತೃತ್ವದಲ್ಲಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಒತ್ತುವರಿ ಪ್ರಕರಣಕ್ಕೆ ಸಂಬAಧಿಸಿದAತೆ ಚರ್ಚಿಸಲು ಚರ್ಚೆಗೆ ಆಗಮಿಸುವಂತೆ ಪಾಲಿಕೆ ಆಯುಕ್ತರು ನಮ್ಮನ್ನು ಆಹ್ವಾನಿಸಿದರು. ಆದರೆ ಇಲ್ಲಿ ಬಂದಾಗ ಆಯುಕ್ತರೇ ಇರಲಿಲ್ಲ, ಇದರಿಂದ ರೋಸಿ ಹೋದ ಸಂಘಟಕರು ಆಯುಕ್ತರ ಕಚೇರಿಯಲ್ಲೇ ದಿಢೀರ್ ಧರಣಿ ಆರಂಭಿಸಿದರು. 

ಈ ವೇಳೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ೭ ದಿನಗಳಗಾಗಿ ಒತ್ತುವರಿ ಆದ ೧ ಎಕರೆ ೧೧ ಗುಂಟೆ ಜಾಗೆಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೇ ಆಯುಕ್ತರ ಕಛೇರಿಯಲ್ಲಿ ಧರಣಿ ಪುನರ್ ಆರಂಭಿಸುತ್ತೇವೆ ಎಂದು ಸಮತಾ ಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಎಚ್ಚರಿಕೆ ನೀಡಿದರು.
news_1781170957_0_598.webp

 

೨೦೧೦ ರಿಂದ ನಿರಂತರವಾಗಿ ಸಮನಾ ಸೇನೆ, ಶ್ರೀ ಭುವನೇಶ್ವರಿ ಸೇವಾ ಸಂಘ ಹಾಗೂ ವಿವಿಧ ದಲಿತ ಸೇವಾ ಸಂಘಗಳ ಮಹಾಮಂಡಳದ ವತಿಯಿಂದ ಇದೇ ವಿಷಯವಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಆದರೂ ಮಹಾಪಾಲಿಕೆಯೂ ಒತ್ತುವರಿ ತೆರವುಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಒತ್ತುವರಿ ಕುರಿತಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆದು ಪ್ರಕರಣ ಅಂತ್ಯಕAಡಿದ್ದು, ಪ್ರಕರಣ ಸೇನಾ ಪರವಾಗಿ ಬಂದಿದೆ. ಕೋರ್ಟ್ ನಿರ್ದೇಶನ ಇದ್ದಾಗಲೂ ಸಹ ಪಾಲಿಕೆ ಆಯುಕ್ತರು ಕಾನೂನು ಕ್ರಮ ಕೈಗೊಳ್ಳಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ಉಳ್ಳಿಕಾಶಿ ಆರೋಪಿಸಿದರು.
ಒತ್ತುವರಿ ಹಿಂದೆ ಪ್ರಭಾವಿ ಕಾಣದ ಕೈಗಳಿದ್ದು, ಅವರು ಹೇಳಿದಂತೆ ಪಾಲಿಕೆ ಆಯುಕ್ತರು ನಡೆಯುತ್ತಿದ್ದಾರೆ. ಒಂದೆಡೆ ಫುಟ್‌ಪಾತ್ ತೆರವುಗೊಳಿಸಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹಿಂಸೆ ನೀಡುತ್ತಿರುವ ಪಾಲಿಕೆ ಕ್ರೀಡಾಂಗಣ ಒತ್ತುವರಿ ತೆರವಿಗೆ ಯಾಕೆ? ಮುಂದಾಗಿತ್ತಿಲ್ಲ. ಈ ದ್ವಂದ್ವ ನಿಲುವು ಏಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಪತ್ರಿಭಟನೆಯಲ್ಲಿ ರೇವಣಸಿದ್ದಪ್ಪ ಹೊಸಮನಿ, ಮನಿಲ್ಲಾ ಬೆಣಗಿ, ಇಮ್ತಿಯಾಜ್ ಬಿಜಾಪುರ, ಮಂಜುನಾಥ ಉಳ್ಳಿಕಾಶಿ, ಮಹೇಶ ತೇರದಾಳ, ಪ್ರಶಾಂತ ವಾಲಿ, ಹನುಮಂತ ಮೂಲಿಮನಿ, ಇಲಿಯಾಸ ಬ್ಯಾಳಿ, ಸೊಹೆಲ್ ಯಾದಗೇರಿ, ಹುಸೇನ ಮದರಂಗಿ, ಅಶೋಕ ಕಾಶೇನವರ ಸೇರಿದಂತೆ ಅನೇಕರಿದ್ದರು.
ವರದಿ:ಸುಧೀರ್ ಕುಲಕರ್ಣಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್ವಸತಿ ಶಾಲೆ ವಿದ್ಯಾರ್ಥಿಗಳ ರಾಗಿಂಗ್‌ : ಬೆಲ್ಟ್ ನಿಂದ ಹಲ್ಲೆ ಸಂಪೂರ್ಣ ಮೌನಕ್ಕೆ ಶರಣಾದ ನಟ ದರ್ಶನ್, ಇತ್ತ ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಬಾಲಕ ಸಾವು ನಿಡಗುಂದಿ ಶಾಲಾ ಆವರಣಕ್ಕೆ ಬಂದ ನಾಗರಹಾವು: ಉರಗ ರಕ್ಷಕ ರವಿ ಮಾದರರಿಂದ ಸುರಕ್ಷಿತ ರಕ್ಷಣೆರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ  ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬದ ನಿಮಿತ್ತವಾಗಿ ಹಣ್ಣು ವಿತರಣೆ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬದ ನಿಮಿತ್ತವಾಗಿ ಹಣ್ಣು ವಿತರಣೆಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ : 1 ಲಕ್ಷ 12 ಸಾವಿರಕ್ಕೂ ಅಧಿಕ ಅನರ್ಹರು ಪತ್ತೆ