Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ನಿಯ ಕೊಲೆಗೆ ಯತ್ನಿಸಿ, ವರದಕ್ಷಿಣೆಗಾಗಿ ಕಿರುಕುಳ : ಪಿಎಸ್‌ಐ ಅರೆಸ್ಟ್ 

Advertisement

ಬೆಂಗಳೂರು: ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಅವರೇ ಪತ್ನಿಯ ಕೊಲೆಗೆ ಯತ್ನಿಸಿ, ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. 

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಭೈರಪ್ಪ ಅವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕಿದ್ದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಅವರೇ ಪತ್ನಿಯ ಕೊಲೆಗೆ ಯತ್ನಿಸಿ, ವರದಕ್ಷಿಣೆಗಾಗಿ ಕಿರುಕುಳ ನೀಡಿದ ಗಂಭೀರ ಆರೋಪದಡಿ ಬಂಧನಕ್ಕೊಳಗಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಭೈರಪ್ಪ ಅವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ, ವರದಕ್ಷಿಣೆ ಕಿರುಕುಳ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಭೈರಪ್ಪ ಅವರು ಕಳೆದ ಕೆಲವು ತಿಂಗಳುಗಳಿಂದ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. 

ಇತ್ತೀಚೆಗೆ ಕೌಟುಂಬಿಕ ಕಲಹ ತೀವ್ರಗೊಂಡ ವೇಳೆ ಮನೆಯಲ್ಲಿದ್ದ ಮಚ್ಚು ಹಿಡಿದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ಸಂತ್ರಸ್ತೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರಂಭದಲ್ಲಿ ಎನ್‌ಸಿಆರ್‌ ದಾಖಲಿಸಲಾಗಿತ್ತು. ಬಳಿಕ ಪ್ರಾಥಮಿಕ ತನಿಖೆಯಲ್ಲಿ ಗಂಭೀರ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿ ಭೈರಪ್ಪ ಅವರನ್ನು ಬಂಧಿಸಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ- ಬಾಂಗ್ಲಾದೇಶ ಮೊದಲ ಟ್ವೆಂಟಿ-೨೦ ನಾಳೆಭಾರತಕ್ಕೆ ೨೫೯ ರನ್‌ಗಳ ಗೆಲುವಿನ ಗುರಿಫ್ರಿಡ್ಜ್ ನಲ್ಲಿ ಪ್ರತ್ಯಕ್ಷವಾಯಿತ್ತು ಶಿವಲಿಂಗ : ನೋಡಲು ಮುಗಿಬಿದ್ದ ಜನನ್ಯೂಜಿಲೆಂಡ್‌ಗೆ ೫ ವಿಕೆಟ್‌ಗಳ ಜಯಪತ್ನಿಯ ಕೊಲೆಗೆ ಯತ್ನಿಸಿ, ವರದಕ್ಷಿಣೆಗಾಗಿ ಕಿರುಕುಳ : ಪಿಎಸ್‌ಐ ಅರೆಸ್ಟ್ ಒಂದು ಸಚಿವ ಸ್ಥಾನದ ಬೆಲೆ ಬರೋಬ್ಬರಿ 100 ಕೋಟಿಯಿಂದ 150 ಕೋಟಿ ರೂ. : ಆರ್ ಅಶೋಕ್ ಶೇ. ೮೦ ರಷ್ಟು ಬಡ್ಡಿಯ ಮಹಾ ವಂಚನೆ: ೨೫ ಕೋಟಿ ಲೂಟಿ ಮಾಡಿದ ಬೆಳಗಾವಿಯ ಇಬ್ಬರು ಕಿಲಾಡಿಗಳ ಹೆಡೆಮುರಿಕಟ್ಟಿದ ಪೊಲೀಸ್!ಪಿ.ಎಸ್.ಐ.ಗಿರಿಮಲ್ಲಪ್ಪ ಉಪ್ಪಾ‌ರ್ ಅವರ ಮಧ್ಯಸ್ಥಿಕೆಆ. 15ರ ಒಳಗೆ ಎಲ್ಲ 5927 ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧೀ ಹೆಸರಿಡಲು ಗಡವು : ಖಂಡ್ರೆಬೆಂಗಳೂರಿನಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ : ಡಿ. ಕೆ ಶಿವಕುಮಾರ್ ಘೋಷಣೆ