Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಗುವಿಗೆ ಜನ್ಮ ನೀಡಿದ 14 ವರ್ಷದ ಅಪ್ರಾಪ್ತ ಬಾಲಕಿ

Advertisement

ಹುಬ್ಬಳ್ಳಿ : ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತ್ಯಂತ ಆಘಾತಕಾರಿ ಮತ್ತು ಕರುಳು ಹಿಂಡುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ ನಗರದ ಕಿಮ್ಸ್ (KMC-RI) ಆಸ್ಪತ್ರೆಯ ನಿರ್ಭಯಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆಕೆಯ ಎಳೆಯ ವಯಸ್ಸಿನಲ್ಲಿ ನಡೆದಿರುವ ಈ ದುರಂತವು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಜುಲೈ 8 ರಂದು ಈ ಅಪ್ರಾಪ್ತ ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ ಎನ್ನಲಾಗಿದೆ. ಹೆರಿಗೆಯಾದ ತಕ್ಷಣ ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಮೊದಲು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. 

ಆದರೆ, ಬಾಲಕಿಯ ವಯಸ್ಸು ಅತ್ಯಂತ ಚಿಕ್ಕದಾಗಿದ್ದರಿಂದ ಮತ್ತು ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಾಲಕಿಯು ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಆಕೆಗೆ ಕಿಮ್ಸ್‌ನ ವಿಶೇಷ 'ನಿರ್ಭಯಾ ವಾರ್ಡ್'ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. 

ಸದ್ಯಕ್ಕೆ ತಾಯಿ (ಬಾಲಕಿ) ಮತ್ತು ನವಜಾತ ಶಿಶು ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಹುಟ್ಟಿದ ಮಗುವಿಗೆ ಕಿಮ್ಸ್‌ನ ಮಕ್ಕಳ ತೀವ್ರ ಚಿಕಿತ್ಸಾ ಘಟಕದಲ್ಲಿ (NICU) ವಿಶೇಷ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗುವಿಗೆ ಜನ್ಮ ನೀಡಿದ 14 ವರ್ಷದ ಅಪ್ರಾಪ್ತ ಬಾಲಕಿವಿವಿಧ ಇಲಾಖೆಗಳ ಒಟ್ಟು 4,723 ಹುದ್ದೆಗಳ ನೇಮಕಾತಿಗೆ ಕೆಇಎಯಿಂದ ಪ್ರತ್ಯೇಕ ಅಧಿಸೂಚನೆ ವಿಚ್ಛೇದನ ಆಗದೇ ಮೊದಲ ಪತ್ನಿ ಜೀವಂತವಾಗಿರುವಾಗ ಎರಡನೇ ಮದುವೆ ಅಸಿಂಧು : ಹೈಕೋರ್ಟ್ ನುಸುಳುಕೋರರಿಗೆ ಕೈ ಸರ್ಕಾರದಿಂದ ರೆಸಿಡೆನ್ಸಿ ಸರ್ಟಿಫಿಕೇಟ್ :ಅರವಿಂದ ಬೆಲ್ಲದ, ಟೆಂಗಿನಕಾಯಿ ವಾಗ್ದಾಳಿ ಸ್ನಾನ ಮಾಡುವಾಗಲೇ ಕೊಡಲಿಯಿಂದ ಕೊಚ್ಚಿ ಮಹಿಳೆ ಬರ್ಬರ ಹತ್ಯೆ ಶಾಲಾ ಸಂಸತ್ತಿನ ನೂತನ ಮಂತ್ರಿಗಳ ಪದಗ್ರಹಣ ಸಮಾರಂಭಪೋಕ್ಸೋ ಕೇಸ್ ದಾಖಲಿಸಿದಕ್ಕೆ ಒಂದೇ ಆರು ಜನರ ಬರ್ಬರ ಹತ್ಯೆ ಒಂದೇ ಕುಟುಂಬದ ಮೂವರನ್ನು ಕೊಚ್ಚಿ ಕೊಂದು ಯುವಕ ಆತ್ಮಹತ್ಯೆ ಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಶಾಸಕ ರಾಜು ಕಾಗೆ ಚಾಲನೆ ನೀಡಿದರುಫೀಪಾ ವಿಶ್ವಕಪ್ ಫುಟ್‌ಬಾಲ್: ಸೆಮಿಫೈನಲ್‌ಗೆ ಸ್ಪೇನ್