Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೋಕ್ಸೋ ಕೇಸ್ ದಾಖಲಿಸಿದಕ್ಕೆ ಒಂದೇ ಆರು ಜನರ ಬರ್ಬರ ಹತ್ಯೆ 

Advertisement

ತೆಲಂಗಾಣ : ಇಡೀ ದೇಶದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪೋಕ್ಸೋ ಪ್ರಕರಣ ದಾಖಲಿಸಿದ್ದಕ್ಕೆ ಆರೋಪಿ ಒಬ್ಬ ಆರು ಜನರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪೋಕ್ಸೋ ಕೇಸ್ ಆರೋಪಿಯಿಂದ ಆರು ಜನರ ಸಾಮೂಹಿಕ ಕೊಲೆ ನೆಡೆದಿದ್ದು ದೈವಲಗೂಡು ಗ್ರಾಮದಲ್ಲಿ 28 ವರ್ಷದ ರಾಜಕುಮಾರ ಎಂಬಾತನಿಂದ ಈ ಕೊಲೆ ನಡೆದಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲಮ್ಮನ ದೈವಲಗೂಡ ಎಂಬಲ್ಲಿ ಈ ಒಂದು ಘಟನೆ ನಡೆದಿದ್ದು, ಆರೋಪಿ ರಾಜಕುಮಾರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.

 ಪೋಕ್ಸೋ ಕೇಸ್ ನ ಅಪ್ರಾಪ್ತ ಬಾಲಕಿ, ಆಕೆಯ ತಾಯಿ, ಅಜ್ಜಿ, ತನ್ನ ಪತ್ನಿ ಸರಿತಾ, ಇಬ್ಬರೂ ಮಕ್ಕಳಿಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮೂರು ವರ್ಷದ ಮಗಳು ಹಾಗು ಎರಡು ವರ್ಷದ ಮಗನನ್ನು ರಾಜಕುಮಾರ್ ಕೊಂದಿದ್ದಾನೆ.

ಜಾಮೀನಿನ ಮೇಲೆ ಬಿಡುಗಡೆಯಾಗಿ ಆರು ಜನರನ್ನು ರಾಜಕುಮಾರ್ ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಹಿಂದೆ ಅಪ್ರಾಪ್ತ ಬಾಲಕಿ ತಂದೆಯನ್ನು ರಾಜಕುಮಾರ್ ಕೊಲೆ ಮಾಡಿದ್ದ. ಕಂಠಪೂರ್ತಿ ಮಧ್ಯ ಕುಡಿಸಿ ಬಾಲಕಿಯ ತಂದೆಯನ್ನು ಕೊಲೆ ಮಾಡಿದ್ದ. ಕೊಲೆಗೈದು ಹಾರ್ಟ್ ಅಟ್ಯಾಕ್ ಎಂದು ಆರೋಪಿ ರಾಜಕುಮಾರ್ ಬಿಂಬಿಸಿದ್ದ. ಈ ಬಗ್ಗೆ ದೂರು ನೀಡಿದ್ದರು ಕೂಡ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಕೇಳಿ ಬಂದಿತ್ತು. ಬಳಿಕ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ರಾಜ್ ಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ.

 ಈ ಬಗ್ಗೆ ಪ್ರಶ್ನಿಸಿದ್ದ ತಾಯಿಯನ್ನು ಕೊಲೆ ಮಾಡಬಹುದಾಗಿ ಬೆದರಿಕೆ ಹಾಕಿದ್ದ. ಇದೀಗ 6 ಜನರನ್ನು ಆರೋಪಿ ರಾಜಕುಮಾರ್ ಸಾಮೂಹಿಕವಾಗಿ ಕೊಲೆ ಮಾಡಿದ್ದಾನೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST