ಮೈಕಲ್ ಮೇರಿನೋ ಅವರ ಪಂದ್ಯದ ಕಡೆಯ ಘಳಿಗೆಯ ಆಕರ್ಷಕ ಗೋಲಿನ ನೆರವಿನಿಂದ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ ೨-೧ ರ ಗೋಲಿನ ಭರ್ಜರಿ ಜಯದೊಂದಿಗೆ ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿತು.
ಪಂದ್ಯದ ೮೮ ನೇ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸುವ ಮೂಲಕ ಮೈಕಲ್ ಮೇರಿನೋ ಸ್ಪೇನ್ ಗೆಲುವಿನ ರೂವಾರಿಯಾದರು.
ಪ್ರತಿಷ್ಠಿತ ಪಂದ್ಯಾವಳಿಯ ಸೆಮಿಫೈನಲ್ ತಲುಪಿರುವ ಸ್ಪೇನ್ ಮಂಗಳವಾರ ನಡೆಯುವ ಉಪಾಂತ್ಯ ಪಂದ್ಯದಲ್ಲಿ ಫೆವರಿಟ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.


