LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಚನ್ನಮ್ಮನವರ ನಿಧನದ ಹಿನ್ನೆಲೆ ಹುಟ್ಟುಹಬ್ಬ ಆಚರಣೆಯಿಲ್ಲ : ದೊಡ್ಡಾಘಟ್ಟ ಚಂದ್ರೇಶ್ ನಿರ್ಧಾರ

Advertisement

ತುರುವೇಕೆರೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರ ಧರ್ಮಪತ್ನಿ ಚನ್ನಮ್ಮನವರು ನಿಧನರಾಗಿರುವ ಹಿನ್ನೆಲೆ ನಾನೂ ಸೇರಿದಂತೆ ಪಕ್ಷ ಹಾಗೂ ಕಾರ್ಯಕರ್ತರು ದುಃಖದಲ್ಲಿರುವ ವೇಳೆ ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಆಗಸ್ಟ್ 08 ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಆಚರಿಸುತ್ತಾರೆ. ಈ ವರ್ಷವೂ ಆಗಸ್ಟ್ 08 ರಂದು ಅದ್ದೂರಿಯಾಗಿ ನನ್ನ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದರು. ಆದರೆ ಪಕ್ಷದ ಬೆನ್ನೆಲೆಬಾಗಿ, ನಮ್ಮೆಲ್ಲರ ತಾಯಿಯಂತಿದ್ದ ಚನ್ನಮ್ಮನವರು ದೈವಾಧೀನರಾಗಿರುವುದು ಬಹಳ ನೋವುಂಟು ಮಾಡಿದೆ. ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸುವುದು ಸರಿಯಲ್ಲದ ಕಾರಣ ನನ್ನೆಲ್ಲಾ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಹುಟ್ಟು ಹಬ್ಬದ ಕಾರಣಕ್ಕೆ ಯಾವುದೇ ಫ್ಲೆಕ್ಸ್ ಹಾಕಬಾರದು, ಹಾರ, ತುರಾಯಿ ಹಾಕಿ ಸಂಭ್ರಮಿಸಬಾರದು ಎಂದು ಮನವಿ ಮಾಡಿದ್ದೇನೆ ಎಂದರು.

ಆಗಸ್ಟ್ 08 ರಂದು ನನ್ನ ಹುಟ್ಟುಹಬ್ಬದಂದು ಚನ್ನಮ್ಮನವರ ಸ್ಮರಣಾರ್ಥ ಅಶಕ್ತರು, ಅಸಹಾಯಕರಿಗೆ ನೆರವಾಗುವುದು, ಅನ್ನದಾಸೋಹ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಪಟ್ಟಣದ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಲಾಗುವುದು. ಆ ಮೂಲಕ ಚನ್ನಮ್ಮನವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶವನ್ನು ನಾನು ಹೊಂದಿದ್ದೇನೆ. ಈ ನನ್ನ ಉದ್ದೇಶಕ್ಕೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಬೆಂಬಲವಾಗಿ ನಿಂತು ಸೇವಾ ಕಾರ್ಯದಲ್ಲಿ ತೊಡಗಲಿದ್ದಾರೆಂದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ ನಲ್ಲಿ 282 ಹುದ್ದೆಗಳಿಗೆ ಅರ್ಜಿ ಆಹ್ವಾನಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಚನ್ನಮ್ಮನವರ ನಿಧನದ ಹಿನ್ನೆಲೆ ಹುಟ್ಟುಹಬ್ಬ ಆಚರಣೆಯಿಲ್ಲ : ದೊಡ್ಡಾಘಟ್ಟ ಚಂದ್ರೇಶ್ ನಿರ್ಧಾರಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗೆ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ : ತೀರ್ಪ ಪ್ರಕಟಿಸಿದ ನ್ಯಾಯಾಲಯದ.ಆಫ್ರಿಕಾ, ಜಿಂಬಾಬ್ವೆ, ನಮಿಬಿಯಾ ಆತೀಥ್ಯದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಮುಂದಿನ ವರ್ಷ ಭಾರತದಲ್ಲಿ ಬಾರ್ಡರ್-ಗವಾಸ್ಕರ ಟ್ರೋಫಿವಿವಿಧ ಮಹನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಗಾಗಿ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಟೆಸ್ಟ್ ಕ್ರಿಕೆಟ್: ಗೆಲುವಿನ ಬಾಗಿಲಲ್ಲಿ ಪಾಕಿಸ್ತಾನ್ ತಂಡಪೋಕ್‌ಲ್ಯಾಂಡ್ ದಕ್ಕೆ ಮತ್ತು ಸತತ ಮೂರು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿ ಇದ್ದು ಕುಸಿದಿದೆ.ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ 15ನೇ ವರ್ಷದ ಜೀವೋದ್ಧಾರ ದಿನಾಚರಣೆ