ಪೋರ್ಟ್ಆಫ್‌ಸ್ಪೇನ್(ವೆಸ್ಟ್ ಇಂಡೀಸ್): ಪಾಕಿಸ್ತಾನ್ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಕ್ವೀನ್ಸ್ ಪಾರ್ಕ್ ಓವೆಲ್ ಮೈದಾನದಲ್ಲಿ ಮೂರನೇ ದಿನದಾಟ ಮುಗಿದಾಗ ವೆಸ್ಟ್ ಇಂಡೀಸ್ ತನ್ನ ದ್ವಿತೀಯ ಸರದಿಯಲ್ಲಿ ೬ ವಿಕೆಟ್‌ಗೆ ೧೦೩ ರನ್‌ಗಳಿಸಿದ್ದು, ಒಟ್ಟಾರೆ ೬೦ ರನ್‌ಗಳನ್ನು ಮುನ್ನಡೆಯನ್ನು ಮಾತ್ರ ಗಳಿಸಿದೆ. ವಿಂಡೀಸ್ ಬಳಿ ಕೇವಲ ೪ ವಿಕೆಟ್ ಉಳಿದಿದ್ದು, ಪಾಕ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಮೊದಲ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ತಂಡ ೯೦ ರನ್‌ಗಳಿಂದ ಗೆದ್ದು, ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೩೪೪ ಹಾಗೂ ೬ ವಿಕೆಟ್‌ಗೆ ೧೦೩
ಪಾಕಿಸ್ತಾನ್ ೩೮೭


