ಸಿಂಧನೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕೋಳಬಾಳ ಪಂಚಾಯಿತಿ ವ್ಯಾಪ್ತಿಗೆ ಬರುವ ಹಂಚಿನಾಳ ಕ್ಯಾಂಪ್ (ಯು) ಗ್ರಾಮದಲ್ಲಿ ಸುಮಾರು 500 ರಿಂದ 600 ಜನಸಂಖ್ಯೆ ಹೊಂದಿರುವ ಗ್ರಾಮವು ಹಲವು ಸಮಸ್ಯೆಗಳ ಆಗರವಾಗಿದೆ.
ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ಸರಿಯಾದ ರಸ್ತೆ ಇಲ್ಲದಿರುವುದರಿಂದ ಯಾವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಭೇಟಿ ನೀಡುತ್ತಿಲ್ಲ ಗ್ರಾಮ ಪಂಚಾಯಿತಿ ಅಧಿಕಾರಿ ಕೂಡ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಕೋಳಬಾಳ ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೀರಭದ್ರಗೌಡ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ನಮ್ಮ ಗ್ರಾಮಕ್ಕೆ ಬಸ್ ಓಡಾಟಕ್ಕಾಗಿ ಹಲವು ಬಾರಿ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಿದ್ದೇವೆ ಆದರೂ ಸಹ ಬಸ್ ಬರ್ತಾ ಇಲ್ಲ ಸ್ಕೂಲ್ ಮಕ್ಕಳು ಶಾಲೆಗೆ ಹೋಗುವುದಕ್ಕೆ ಬಾಣಂತಿಯರು ಮತ್ತು ವೃದ್ಧರು ಆಸ್ಪತ್ರೆಗೆ ಹೋಗಲು ಪರದಾಡ ಬೇಕಾಗಿದೆ ಹಾಗೂ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದೆ ಈ ಗ್ರಾಮಕ್ಕೆ ಮುಖ್ಯವಾಗಿ ರಸ್ತೆ, ಬಸ್, ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆಗಳು ಪರಿಹರಿಸಲು ಸ್ಥಳೀಯ ಶಾಸಕ ಬಸನಗೌಡ ತುರುವಿಹಾಳ ಮತ್ತು ತಾಲೂಕ ಆಡಳಿತ ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯ ಮುಖಂಡ ಜಿ. ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆದನಗೌಡ ಪೊಲೀಸ್ ಪಾಟೀಲ್. ರಮೇಶ್ ಮೇಸ್ತ್ರಿ. ಡಿಎಸ್ಎಸ್ ಮುಖಂಡ ನಿರುಪಾದೆಪ್ಪ ಎಲೆಕೊಡ್ಲಿಗಿ ನರಸಪ್ಪ. ಟಿ. ಶರಣಪ್ಪ. ಮುದಿಯಪ್ಪ ಯಮನಪ್ಪ ನಾಗರಾಜ ಬಸವರಾಜ. ದುರ್ಗಪ್ಪ ಸುರೇಶ್ ಕಲ್ಮಂಗಿ.ಶಿವಪ್ಪ ನಂದವಾಡಗಿ. ಇನ್ನು ಅನೇಕರು ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ

