ಗದಗ: ಗದಗದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳೇ ಜ್ವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ವತಃ ಕಲ್ಲಯ್ಯಜ್ಜ ಶ್ರೀಗಳೇ ಮಾಹಿತಿ ನಿಡಿದ್ದು, ಟ್ರಸ್ಟಿಗಳ ಬೆದರಿಕೆಗೆ ಕಂಗಾಲಾಗಿರುವ ಶ್ರೀಗಳು ಕಣ್ಣೀರಿಟ್ಟಿದ್ದಾರೆ.
ಮೂವರು ಟ್ರಸ್ಟಿಗಳಿಂದಲೇ ತನಗೆ ಜೀವ ಬೆದರಿಕೆ ಇದೆ ಎಂದು ಕಲ್ಲಯ್ಯಜ್ಜ ಶ್ರೀಗಳು ಆರೋಪ ಮಾಡಿದ್ದಾರೆ.
ಲಕ್ಷಾಂತರ ಹಣ ಕೊಡುವಂತೆ ಓರ್ವ ಟ್ರಸ್ಟಿ ತನಗೆ ನಿರಂತರವಾಗಿ ಒತ್ತಾಯ ಮಾಡುತ್ತಿದ್ದು, ಹಣ ಕೊಡದಿದ್ದಕ್ಕೆ ತನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.


