Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಂದಿನ 6 ತಿಂಗಳಲ್ಲಿ 72,186 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ

Advertisement

ಬೆಂಗಳೂರು : ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಮತ್ತು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿದೆ. ಈ ಕುರಿತಂತೆ 24.06.2026 ರಂದು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಒಟ್ಟು 72,186 ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಹುದ್ದೆಗಳು ವಿವಿಧ ಇಲಾಖೆಗಳಾದ ಶಿಕ್ಷಣ, ಪೊಲೀಸ್, ಆರೋಗ್ಯ, ಕಂದಾಯ ಹಾಗೂ ಇತರೆ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ಇಲಾಖಾವಾರು ಅಧಿಸೂಚನೆಗಳು ಬಿಡುಗಡೆ ಆಗಲಿದ್ದು, ಅರ್ಜಿ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟು ಹುದ್ದೆಗಳು: ಸರ್ಕಾರವು ಸುಮಾರು 72,186 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದೆ.2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಈಗಾಗಲೇ ಸಮ್ಮತಿ ನೀಡಿದೆ.ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದ 32,177 ಹುದ್ದೆಗಳ ಪೈಕಿ ಶೇ. 80 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಮ್ಮತಿಸಿದೆ.

ಮೇಲ್ವಿಚಾರಣೆ: 17 ಇಲಾಖೆಗಳ ನೇರ ನೇಮಕಾತಿಯನ್ನು ಮೇಲ್ವಿಚಾರಣೆ ಮಾಡಲು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಮತ್ತು 34 ಇಲಾಖೆಗಳ ನೇಮಕಾತಿಯನ್ನು ಮೇಲ್ವಿಚಾರಣೆ ಮಾಡಲು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ.

ನಿಗದಿತ ಕಾಲಮಿತಿ: ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರವು ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ:

2 ತಿಂಗಳಲ್ಲಿ: ನೇಮಕಾತಿ ಅಧಿಸೂಚನೆ (Notification) ಹೊರಡಿಸುವುದು.

4 ತಿಂಗಳಲ್ಲಿ: ನೇಮಕಾತಿ ಪರೀಕ್ಷೆಗಳನ್ನು ನಡೆಸುವುದು.

6 ತಿಂಗಳಲ್ಲಿ: ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೇಮಕಾತಿ ಆದೇಶಗಳನ್ನು ಹೊರಡಿಸುವುದು.

ಈ ಆದೇಶವನ್ನು 20.06.2026 ರಂದು ನಡೆದ ಸಚಿವ ಸಂಪುಟದ ನಿರ್ಣಯದಂತೆ, ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹೊರಡಿಸಲಾಗಿದೆ.

 

     

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಂಬಲ್ಡನ್ ಟೆನಿಸ್: ಫೈನಲ್ ತಲುಪಿದ ಜಾನ್ನಿಕ್ ಸಿನ್ನೇರ್ಇಂದು ಜಿಂಬಾಬ್ವೆ- ಬಾಂಗ್ಲಾದೇಶ ಮೂರನೇ ಏಕದಿನ ಪಂದ್ಯಭಾರತ ಇಂಗ್ಲೆAಡ್ ಕಡೆಯ ಟ್ವೆಂಟಿ-೨೦ ಇಂದುಮೊಬೈಲ್‌ನಲ್ಲಿ ರೈಲು ಟಿಕೆಟ್ ತೋರಿಸಿದ್ದರೇ ದಂಡ : ರೈಲು ಇಲಾಖೆ ಹೊಸ ನಿಯಮ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರಿ  : ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ ತಿಪಟೂರಿನ ಕೊಬ್ಬರಿ, ಸಾಣಿಕಟ್ಟೆ ಉಪ್ಪು ಸೇರಿ ರಾಜ್ಯದ ನಾಲ್ಕು ಉತ್ಪನ್ನಗಳಿಗೆ ಜಿಐ ಮಾನ್ಯತೆ ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್