ಮ್ಯಾಚೆAಸ್ಟರ್ (ಇಂಗ್ಲೆAಡ್): ಭಾರತ ಮಹಿಳಾ ಕ್ರಿಕೆಟ್ ತಂಡವು ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಓಲಟ್ರೆöÊಪಿಡ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ. ಎ, ಗುಂಪಿನಲ್ಲಿ ನಡೆಯುವ ಪಂದ್ಯಾವಳಿಯ ೨೩ ನೇ ಪಂದ್ಯ ಇದಾಗಿದೆ.
ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಉತ್ತಮ ಆರಂಭ ಮಾಡಿದ್ದ ಭಾರತ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧದ ಕಡೆಯ ಲೀಗ್ ಪಂದ್ಯವನ್ನು ಸೋತು ನಿರಾಸೆ ಅನುಭವಿಸಿದ್ದರು. ಆದರೆ ಇದೀಗ ಬಾಂಗ್ಲಾ ವಿರುದ್ಧದ ಈ ಪಂದ್ಯವನ್ನು ಗೆದ್ದು ಮತ್ತೇ ಗೆಲುವಿನ ಲಯಕ್ಕೆ ಮರಳಬೇಕಿದೆ.


