ಬಾಗೇಪಲ್ಲಿ :ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ನೂತನ ಕಛೇರಿಯನ್ನು ನಿರ್ಮಿಸಲು ಭೂಮಿ ಪೂಜೆ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಸೀಕಲ್ ರಾಮಚಂದ್ರಗೌಡರು ನೇರವೆರಿಸಿದ್ದರು.
ಈ ಬಿಜೆಪಿ ಪಕ್ಷದ ನೂತನ ಕಛೇರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜುರವರು ಭಾಗವಹಿಸಿ, ಮಾತನಾಡಿ, ಇಂದು ಬಾಗೇಪಲ್ಲಿ ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಲಿಷ್ಟವಾಗಿ ಕಟ್ಡಲು, ಸಂಘಟನೆ ಕಟ್ಟಲು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಅನುಕೂಲಕ್ಕಾಗಿ ಬಾಗೇಪಲ್ಲಿ ಡಿ.ವಿ.ಜಿ ರಸ್ತೆಯಲ್ಲಿನ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಪಕ್ಕದಲ್ಲಿ ಬಿಜಿಪಿ ಪಕ್ಷದ ಕಛೇರಿಯನ್ನು ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಇಂದು ಭೂಮಿ ಪೂಜೆಯನ್ನು ಶ್ರಧ್ದಾ ಭಕ್ತಿಯಿಂದ ನೆರವೇರಿಸಿದ್ದೇವೆ.
ಈ ಬಿಜೆಪಿ ಕಛೇರಿಯನ್ನು ಅತೀ ಶೀಘ್ರದಲ್ಲಿ ನಿರ್ಮಿಸಿ ಕಛೇರಿಯು ನಿರ್ಮಾಣವಾದ ನಂತರ ಈ ನೂತನ ಬಿಜೆಪಿ ಕಛೇರಿಯ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಕೆ.ಸುಧಾಕರ ರವರು ಹಾಗೂ ಹಲವಾರು ಗಣ್ಯರ ಸಮುಖದಲ್ಲಿ ಬಿಜೆಪಿ ಕಛೇರಿಯ ಉದ್ಘಾಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ ಮಂಡಲ ಅಧ್ಯಕ್ಷ ಗಂಗರೆಡ್ಡಿ, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಆರ್. ವೆಂಕಟೇಶ್, ಕೋತಕೋಟೆ ಲೋಕೇಶ್, ಶ್ರೀನಿವಾಸ್ ,ಜಿನ್ನಿ, ಗೋಪಿ ಚಿಕ್ಕಪೂಜಪ್ಪ, ಗೋಪಾಲ, ರಘುನಾಥರೆಡ್ಡಿ,ಮದುಸೂದನ ರೆಡ್ಡಿ, ರವಿಕುಮಾರ್, ವೆಂಕಟಶಿವಪ್ಪ, ರಾಮಚಂದ್ರಪ್ಪ, ಅಂಜಿನಪ್ಪ ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್


