Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪುಟ ವಿಸ್ತರಣೆ ಕಸರತ್ತು : ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ 

Advertisement

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕಾಲ ಕೂಡಿಬಂದಿದೆ. 

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಬರುವ ಸೋಮವಾರ ಅಂದರೆ ಜುಲೈ 20 ರಂದು ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಬಲವಾದ ಸಾಧ್ಯತೆಗಳಿವೆ.

ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ

ಸಂಪುಟ ಕಸರತ್ತನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬುಧವಾರ ರಾತ್ರಿಯೇ ತಮ್ಮದೇ ಆದ ಪ್ರತ್ಯೇಕ ಪಟ್ಟಿಗಳೊಂದಿಗೆ ದೆಹಲಿ ತಲುಪಿದ್ದಾರೆ.

ಗುರುವಾರ (ಇಂದು) ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ.

ಡೆಹ್ರಾಡೂನ್ ಪ್ರವಾಸ ರದ್ದುಗೊಳಿಸಿರುವ ರಾಹುಲ್ ಗಾಂಧಿ ಅವರೂ ಈ ಸಭೆಯಲ್ಲಿ ಭಾಗವಹಿಸಿ ಅಂತಿಮ ಪಟ್ಟಿಗೆ 'ಗ್ರೀನ್ ಸಿಗ್ನಲ್' ನೀಡಲಿದ್ದಾರೆ ಎನ್ನಲಾಗುತ್ತಿದೆ.

ದೆಹಲಿಗೆ ಹೊರಡುವ ಮುನ್ನ 'ಕಾವೇರಿ' ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸುಮಾರು 40 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿರುವುದು ಗಮನಾರ್ಹ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಥಮ ಬಾರಿಗೆ ಧಾರವಾಡ ಐಐಟಿಯಿಂದ ಗೌರವ ಡಾಕ್ಟರೇಟ್ ಘೋಷಣೆ : ಸುಧಾಮೂರ್ತಿಗೆ ಒಲಿದ ಗೌರವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು ಸಂಪುಟ ವಿಸ್ತರಣೆ ಕಸರತ್ತು : ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ ಇಂದಿನಿಂದ ಶಾಶ್ವತ ನಿವಾಸ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಆರಂಭ : ಕರ್ನಾಟಕದಲ್ಲಿಯೇ ಮೊದಲು ಇಂಗ್ಲೆAಡ್ ೬೦ ವರ್ಷಗಳ ವಿಶ್ವಕಪ್ ಬರ ನೀಗೀತೇ?ಭಾರತ- ಇಂಗ್ಲೆAಡ್ ದ್ವಿತೀಯ ಏಕದಿನ ಪಂದ್ಯ ನಾಳೆಜಿಂಬಾಬ್ವೆಗೆ ೩೨ ರನ್‌ಗಳ ಜಯಧಾರವಾಡ ವೈದ್ಯಯಿಂದಲೇ ಘೋರ ಕೃತ್ಯ : ಚಾಕುವಿನಿಂದ ಇರಿದು ವೈದ್ಯ ಪತಿ ಹತ್ಯೆ ಮಿಕ್ಸ್ಚರ್‌ನಲ್ಲಿ ಇರುವ ಶೇಂಗಾ ಬೀಜ ಗಂಟಲಿನಲ್ಲಿ ಸಿಕ್ಕು ಮೂರು ವರ್ಷದ ಕಂದಮ್ಮ ಸಾವು ನಿಪ್ಪಾಣಿ ಲೋಕಸಭಾ ಸದಸ್ಯರಿಂದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು