ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯ ಕಳೆದ ಬಾರಿಯ ಚಾಂಪಿಯನ್ ಅರ್ಜಿಂಟಿನಾ ಹಾಗೂ ಇಂಗ್ಲೆAಡ್ ತಂಡಗಳ ನಡುವೆ ನಡೆಯಲಿದೆ.
ಅರ್ಜಿಂಟಿನಾ ಕಳೆದ ಬಾರಿಯ ಚಾಂಪಿಯನ್ ತಂಡ ಎಂಬ ಹೆಗ್ಗಳಿಕೆಯ ನಡುವೆ ಈ ಪಂದ್ಯಕ್ಕೆ ಇಳಿಯಲಿದೆ. ಇನ್ನೊಂದೆಡೆ ಇಂಗ್ಲೆAಡ್ ತಂಡ ೧೯೬೬ ರಿಂದ ಈ ವರೆಗೆ ವಿಶ್ವಕಪ್ ಗೆದ್ದಿಲ್ಲ. ೬೦ ವರ್ಷಗಳ ವಿಶ್ವಕಪ್ ಬರ ನೀಗಿಸುವ ಯತ್ನವಾಗಿ ಇಂಗ್ಲೆAಡ್ ಕಣಕ್ಕೆ ಇಳಿಯುತ್ತಿದೆ.
ಎರಡು ಬಲಾಢ್ಯ ತಂಡಗಳು ಕಣಕ್ಕೆ ಇಳಿಯುತ್ತಿದ್ದು, ಇಂದು ಮಧ್ಯರಾತ್ರಿ ನಡೆಯುವ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.


