ಜಪಾನ್ ನಲ್ಲಿ ನಡೆಯುವ ಎಶಿಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುವ ಭಾರತ ಕ್ರಿಕೆಟ್ ತಂಡಕ್ಕೆ ಪ್ರತ್ಯೆಕ ಕೊಠಡಿಗಳನ್ನು ನೀಡಲು ಸಾಧ್ಯವಿಲ್ಲ. ಬಿಸಿಸಿಐ ಅಗತ್ಯ ಕ್ರಮಗಳ ಜತೆಗೆ ತನ್ನ ಅಟಗಾರರಿಗೆ ಪ್ರತ್ಯೆಕ ಕೊಠಡಿ ನೀಡಲು ಸ್ವತಂತ್ರವಾಗಿದೆ ಎಂದು ಇಂಡಿಯನ್ ಒಲಿಂಪಿಕ್ ಕಮಿಟಿ (ಐಓಎ) ತಿಳಿಸಿದೆ.
ಕೂಟದಲ್ಲಿ ಪಾಲ್ಗೊಂಡ ಭಾರತದ ಎಲ್ಲ 360 ಕ್ರೀಡಾ ಪಟುಗಳು ನಮಗೆ ಸಮಾನರು. ಕ್ರಿಕೆಟ್ ಆಟಗಾರರಿಗೆ ಮಾತ್ರ ವಿಭಿನ್ನ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಇಂಡಿಯನ್ ಒಲಿಂಪಿಕ್ ಕಮಿಟಿ ತಿಳಿಸಿದೆ.


