Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎದೆಗೆ ಗುಂಡಿಟ್ಟುಕೊಂಡು ತಾವೇ ಶೂಟ್ ಮಾಡಿಕೊಂಡ ಸಿ. ಜೆ ರಾಯ್

Advertisement
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್  ಮುಖ್ಯಸ್ಥ, ಉದ್ಯಮಿ ಡಾ. ಸಿ.ಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ವರದಿಯಲ್ಲೇನಿದೆ?

ಶೂಟಿಂಗ್ ವಿಧಾನ: ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಟ್ರಿಗರ್ ಒತ್ತಿದ್ದಾರೆ. ಅತ್ಯಂತ ಸಮೀಪದಿಂದ (Point Blank Range) ಗುಂಡು ಹಾರಿಸಿಕೊಂಡಿದ್ದರಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ.

ಪಾಕೆಟ್ ಗನ್ನಿಂದ ಹಾರಿದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶ ಮತ್ತು ರಕ್ತನಾಳಗಳ ಮೂಲಕ ಹಾದುಹೋಗಿ ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ.

ವಿಧಿವಿಜ್ಞಾನ ಪರೀಕ್ಷೆ: ಮರಣೋತ್ತರ ಪರೀಕ್ಷೆಯ ವೇಳೆ ಬೆನ್ನಿನಲ್ಲಿ ಸಿಲುಕಿದ್ದ ಬುಲೆಟ್ನ್ನು ಹೊರತೆಗೆಯಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.

ಪರವಾನಗಿ ಹೊಂದಿದ್ದ ಪಿಸ್ತೂಲ್: ಆತ್ಮಹತ್ಯೆಗೆ ಬಳಸಲಾದ NP bore 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆದಿದ್ದ ಆಯುಧ ಎಂಬುದು ಖಚಿತವಾಗಿದೆ. ಪೊಲೀಸರು ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮೊಬೈಲ್ನಲ್ಲಿ ಅಡಗಿದೆಯೇ ಡೆತ್ ಸೀಕ್ರೆಟ್? ಸಿಜೆ ರಾಯ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಅವರ ಮೊಬೈಲ್ ಫೋನ್ನಲ್ಲಿರುವ ದತ್ತಾಂಶಗಳನ್ನು (Data) ಮರುಪಡೆಯಲು ಸಿಐಡಿ ಸೈಬರ್ ಸೆಲ್ಗೆ ಕಳುಹಿಸಲಾಗಿದೆ.

ಯಾವುದೇ ಸಾಲಬಾಧೆ ಅಥವಾ ಶತ್ರುಗಳಿಲ್ಲದಿದ್ದರೂ, ಐಟಿ (Income Tax) ಅಧಿಕಾರಿಗಳ ಒತ್ತಡವಿತ್ತೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂತ್ಯಕ್ರಿಯೆ: ಸಿಜೆ ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ (Casagrand) ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಜ್ಜಾಗಿದ್ದಾರೆ. ನಟ ಮೋಹನ್ ಲಾಲ್ ಸೇರಿದಂತೆ ಹಲವು ಗಣ್ಯರು ರಾಯ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಡಾ. ಸಿ.ಜೆ. ರಾಯ್ ಯಾರು.?

ಡಾ. ಸಿ.ಜೆ. ರಾಯ್ (CJ Roy) ಅವರು ಕೇವಲ ಒಬ್ಬ ಉದ್ಯಮಿಯಷ್ಟೇ ಆಗಿರಲಿಲ್ಲ, ಶೂನ್ಯದಿಂದ ಕೋಟ್ಯಂತರ ರೂಪಾಯಿಯ ಸಾಮ್ರಾಜ್ಯ ಕಟ್ಟಿದ ಒಬ್ಬ ಅದ್ಭುತ ಸಾಧಕರಾಗಿದ್ದರು.

ಬಹಳ ಸಾಮಾನ್ಯ ಕುಟುಂಬದಿಂದ ಬಂದ ಇವರು, ವೃತ್ತಿಜೀವನ ಆರಂಭಿಸಿದ್ದು ಒಬ್ಬ ಸಣ್ಣ ಉದ್ಯಮಿಯಾಗಿ. ನಂತರ ದುಬೈಗೆ ತೆರಳಿ ಅಲ್ಲಿ ಉದ್ಯಮದಲ್ಲಿ ಯಶಸ್ಸು ಕಂಡರು.

ಬಳಿಕ ಬೆಂಗಳೂರನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ‘ಕಾನ್ಫಿಡೆಂಟ್ ಗ್ರೂಪ್’ ಆರಂಭಿಸಿದರು. ಇಂದು ಅವರ ಸಂಸ್ಥೆಯು ಸುಮಾರು 8,500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಮ್ರಾಜ್ಯವಾಗಿ ಬೆಳೆದಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ