Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ. ಕೆ ಶಿವಕುಮಾರ್ ಗೆ ಬರ್ತ್‌ಡೇ ಗಿಫ್ಟ್ :ಯೆಜ್ಡಿ ರೋಡ್ಸ್ಟರ್ ಬೈಕ್ ಮೇಲೆ ಸವಾರಿ 

Advertisement

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. 

ಭಾರತೀಯ ಕ್ಲಾಸಿಕ್ ಬೈಕ್ಗಳ, ಅದರಲ್ಲೂ 'ಯೆಜ್ಡಿ' ಬೈಕ್ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚ ಹೊಸ 'ರೆಡ್ ವೂಲ್ಫ್ʼ ಬಣ್ಣದ ಯೆಜ್ಡಿ ರೋಡ್ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್ಗಳೆಂದರೆ ಎಲ್ಲಿಲ್ಲದ ಕ್ರೇಜ್. ಅದೇ ಬೈಕ್ ಅನ್ನು ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರು. ಯುವಕನಾಗಿದ್ದಾಗ ಇದೇ ಯೆಜ್ಡಿ ಬೈಕ್ನಲ್ಲಿ ತಾವು ಮಾಡಿದ ಲಾಂಗ್ ರೈಡ್ಗಳನ್ನು ಹಾಗೂ ಆ ದಿನಗಳ ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದರು.

ಬೆಂಗಳೂರು ನಗರ ಕೇವಲ ಐಟಿ-ಬಿಟಿ, ಎಐ ಮತ್ತು ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ತನ್ನದೇ ಆದ ವಿಶಿಷ್ಟ 'ಬೈಕ್-ರೈಡಿಂಗ್ ಕಲ್ಚರ್'ಗೂ ಜಗತ್ಪ್ರಸಿದ್ಧವಾಗಿದೆ.

ಇಂದಿಗೂ ಉದ್ಯಾನ ನಗರಿಯ ಯುವಕರು ಮತ್ತು ಬೈಕ್ ಪ್ರೇಮಿಗಳ ಮನಸ್ಸಿನಲ್ಲಿ ಯೆಜ್ಡಿ ಬ್ರ್ಯಾಂಡ್ ತನ್ನದೇ ಆದ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಯುವ ಜನರ ಸ್ವಾತಂತ್ರ್ಯ ಮತ್ತು ಆಕಾಂಕ್ಷೆಯ ಸಂಕೇತವಾಗಿಯೂ ಗುರುತಿಸಿಕೊಂಡಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST