Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ : ದೂರು ದಾಖಲು

Advertisement

ಬೆಳಗಾವಿ: ಸತೀಶ್ ಜಾರಕಿಹೊಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ʻಕರುನಾಡ ಕುರುಬಗೌಡ್ರು ಹಾಗೂ ಬಂಡಾಯ ಧ್ವನಿʼ ಎಂಬ ನಕಲಿ ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ.

“ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ಧ 37 ಶಾಸಕರಿಂದ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಸಹಿ ಸಂಗ್ರಹ ಮಾಡಿದ್ದಾರೆ” ಎಂಬ ಗಂಭೀರ ಆರೋಪ ಮಾಡಲಾಗಿದೆ. ಆದರೆ ಈ ಆರೋಪವನ್ನು ಸ್ವತಃ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. 

ಹೀಗಾಗಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಇಲ್ಲಸಲ್ಲದ ಅಪವಾದ ಹೊರಿಸಿ ಅವರ ಹೆಸರು ಹಾಳು ಮಾಡಲು ನಕಲಿ ಫೇಸ್ ಬುಕ್ ಖಾತೆಯಲ್ಲಿ ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಖ್ಯವಾಗಿ ಕುರುಬ ಜನಾಂಗ ಮತ್ತು ವಾಲ್ಮೀಕಿ ಜನಾಂಗದ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿ ಸಾರ್ವಜನಿಕರಲ್ಲಿ ಶಾಂತಿಭಂಗ ಮತ್ತು ದೊಂಬಿ ಉಂಟು ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. 

ಶೀಘ್ರವೇ ಸುಳ್ಳು ಸುದ್ದಿ ಹರಡಿಸುವವರ ಹಾಗೂ ಈ ಎರಡು ನಕಲಿ ಫೇಸ್ ಬುಕ್ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಠಾಣೆಗೆ ರಾಜಶೇಖರ ತಳವಾರ ದೂರು ನೀಡಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ : ಮೂವರು ಅರೆಸ್ಟ್ ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ : ದೂರು ದಾಖಲು ಸಂಗೊಳ್ಳಿ ರಾಯಣ್ಣನ ರೀತಿಯೇ ಸಿದ್ದರಾಮಯ್ಯರಿಗೂ ಅವರ ಜತೆಯಿದ್ದವರೇ ಚೂರಿ ಹಾಕಿದ್ರು : ಯತ್ನಾಳ್ಡಿ.ಕೆ.ಶಿವಕುಮಾರ್ ಸಿಎಂಯಾಗಿದ್ದಕ್ಕೆ  ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ : ಶಾಸಕ ಯತ್ನಾಳ್ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ : ಮಲ್ಲಿಕಾರ್ಜುನ ಖರ್ಗೆಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಅಥವಾ ಗೋ ಹತ್ಯೆ ಪ್ರಸ್ತಾವನೆ ಮುಂದಿಲ್ಲ : ಕೇಂದ್ರ ಸ್ಪಷ್ಟನೆ ಕಳ್ಳನನ್ನು ನೋಡಿದ ಮಹಿಳೆ ಮೇಲೆ ಫೈರಿಂಗ್ ಮಾಡಿದ ಕಿರಾತಕ : ಗ್ರಾಮಸ್ಥರಿಂದ ಥಳಿತ ಡೆತ್ ನೋಟ್ ಬರೆದಿಟ್ಟು ಉಪತಹಶೀಲ್ದಾರ್ ಆತ್ಮಹತ್ಯೆ ಜೂನ್ ೩ ರಂದು ರಾಜ್ಯದ ೨೫ ನೇ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ರಿಕೆಟ್: ಪಾಕಿಸ್ತಾನ್ ತಂಡಕ್ಕೆ ೫ ವಿಕೆಟ್‌ಗಳ ಜಯ