LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಆಹ್ವಾನ : ರಾಜಾ ವೆಂಕಟಪ್ಪನಾಯಕ

Advertisement

ಮಾನ್ವಿ : ಪಟ್ಟಣದ ಬೆಟ್ಟದಗವಿಯಲ್ಲಿರುವ ದಿಗಂಬರ ಅವಧೂತ ಶ್ರೀ ಅನ್ನಮಯ ತಾತ ಮಹಾಯೋಗಿಗಳವರ 41ನೇ ವಾರ್ಷಿಕ ಆರಾಧನಾ ಮಹೋತ್ಸವದ ಅಂಗವಾಗಿ ನವೆಂಬರ್ 19ರಿಂದ 21ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ತಿಳಿಸಿದ್ದಾರೆ.
ನವೆಂಬರ್ 19ರಂದು ಸಂಜೆ 5 ಗಂಟೆಗೆ ಶ್ರೀ ಅನ್ನಮಯ ತಾತ ಮಹಾಯೋಗಿಗಳವರ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ನವೆಂಬರ್ 20ರಂದು ಶ್ರೀ ಅನ್ನಮಯ ತಾತ ಮಹಾಯೋಗಿಗಳವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನವೆಂಬರ್ 21ರಂದು ಸಂಜೆ 5 ಗಂಟೆಗೆ ಬೆಟ್ಟದಗವಿಯಲ್ಲಿರುವ ದಿಗಂಬರ ಅವಧೂತ ಶ್ರೀ ಅನ್ನಮಯ ತಾತ ಮಹಾಯೋಗಿಗಳವರ ದೇವಸ್ಥಾನದ ಆವರಣದಲ್ಲಿ ಉಚ್ಚಾಯ ಮಹೋತ್ಸವವು ವೈಭವದಿಂದ ನೆರವೇರಲಿದೆ.

ಆರಾಧನಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅನ್ನಮಯ ತಾತ ಮಹಾಯೋಗಿಗಳವರ ಆಶೀರ್ವಾದಕ್ಕೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಿಜೂರಾಮ್ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಗಳ ಸುಲಭ ಗೆಲುವು ಜಿಪುಣನಾಗಿ ಮೃತಪಟ್ಟವನ ಬ್ಯಾಂಕ್ ನಲ್ಲಿತ್ತು 70 ಲಕ್ಷ ರೂ. : ಚಿಕಿತ್ಸೆಗೂ ಹಣ ಬಳಸದೆ ದುರಂತ ಅಂತ್ಯನಾನು ದೇವರನ್ನು ಪೂಜೆ ಮಾಡಲ್ಲ. ಆಗಂತ ದೇವರಿಲ್ಲ ಅಂತ ಹೇಳಲ್ಲ : ಸಿದ್ದರಾಮಯ್ಯ ಪೆಟ್ರೋಲ್ ನಲ್ಲಿ ಮಾತ್ರ ಎಥೆನಾಲ್ ಮಿಕ್ಸ್ ಮಾಡುತ್ತಿದ್ದೇವೆ : ಮುರುಗೇಶ್ ನಿರಾಣಿಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಗ್ರ ಲತೀಫ್ ಭಟ್ ಎನ್ ಕೌಂಟರ್ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿ:  ಕಬ್ಬು ಬೆಳೆಗಾರರಿಗೆ ಬಂಪರ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್ ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್ ನಾಳೆಯಿಂದ ಆರಂಭಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಆಹ್ವಾನ : ರಾಜಾ ವೆಂಕಟಪ್ಪನಾಯಕಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ : ನಾಲ್ವರು ಅಂತರರಾಜ್ಯ ಯುವತಿಯರ ರಕ್ಷಣೆ