ಬೆಳಗಾವಿ : ಸಕ್ಕರೆ ಕಾರ್ಖಾನೆಗಳ (Sugarcane) ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ(farmers ) ಬಂಪರ್ ಸಿಕ್ಕಿದೆ. ಟನ್ ಕಬ್ಬಿಗೆ 5500 ರೂಪಾಯಿ ಕೇಳಿ ರೈತರು ದೊಡ್ಡ ಹೋರಾಟ ನಡೆಸಿದ್ದರು.
ಕೊನೆಗೆ ಕಾರ್ಖಾನೆಗಳು 3600 ರೂಪಾಯಿ ಕೊಡಲು ಒಪ್ಪಿದ್ದರಿಂದ ಹೋರಾಟ ನಿಂತಿತ್ತು.ಆದರೆ ಈಗ ಪರಿಸ್ಥಿತಿ ಮತ್ತೆ ಬದಲಾಗಿದೆ.
ಸಹಕಾರಿ ಇಲಾಖೆಯ ಘಟಪ್ರಭಾ ಸಕ್ಕರೆ ಕಾರ್ಖಾನೆ ಖಾಸಗಿ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ಘೋಷಿಸಿ ಮುಂದೆ ಬಂದಿದೆ.
ಮೊದಲ ಕಂತಿನಲ್ಲೇ ಟನ್‌ಗೆ 3800 ರೂಪಾಯಿ ಕೊಡುವುದಾಗಿ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಸಕ್ಕರೆ ಮಾರಾಟದ ಬೆಲೆ ನೋಡಿ ಮುಂದೆ ಇನ್ನೂ ಹೆಚ್ಚುವರಿ ಹಣ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಕಾರ್ಖಾನೆಗಳಲ್ಲಿ ಕೇವಲ ನಾಲ್ಕು ಮಾತ್ರ ಸಹಕಾರಿ ಕಾರ್ಖಾನೆಗಳು. ಬರಗಾಲದಿಂದ ಕಬ್ಬಿನ ಕೊರತೆ ತೀವ್ರವಾಗಿದ್ದು, ಕಬ್ಬು ಪಡೆಯಲು ಕಾರ್ಖಾನೆಗಳ ನಡುವೆ ಪೈಪೋಟಿ ಶುರುವಾಗಿದೆ.
ಇದೇ ಕಾರಣಕ್ಕೆ ಸತೀಶ್ ಜಾರಕಿಹೊಳಿ ಅವರ ಕಾರ್ಖಾನೆಗಳು ಕೂಡ ಟನ್‌ಗೆ 3800 ರೂಪಾಯಿ ಘೋಷಿಸಿವೆ. ಹೀಗಾಗಿ ರೈತರಿಗೆ ನಿರೀಕ್ಷಿಸದ ರೀತಿಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದೆ.


