LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಗ್ರ ಲತೀಫ್ ಭಟ್ ಎನ್ ಕೌಂಟರ್

Advertisement

ಶ್ರೀ ನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಅಲಿಯಾಸ್ ಲತೀಫ್ ಭಟ್ (22) ಹತನಾಗಿದ್ದಾನೆ. 

ಈತನ ತಲೆಗೆ ಜಮ್ಮು-ಕಾಶ್ಮೀರ ಪೊಲೀಸರು 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.ಕಳೆದ ನವೆಂಬರ್ 11ರಂದು ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ (CRPF) ಯೋಧರ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಈತನಾಗಿದ್ದನು.

ಮಸೀದಿಯಲ್ಲಿ ಅಡಗಿದ್ದ ಉಗ್ರ:

ಕುಲ್ಗಾಮ್‌ನ ದೇವಸರ್ ಪ್ರದೇಶದ ಜಂಗಲ್‌ಪೋರಾದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಮಸೀದಿಯೊಂದರಲ್ಲಿ ಅಡಗಿದ್ದ ಲತೀಫ್ ಭಟ್‌ನನ್ನು ಸುತ್ತುವರಿದ ಯೋಧರು, ಶರಣಾಗುವಂತೆ ಸೂಚಿಸಿದ್ದಾರೆ.

ಆದರೆ, ಶರಣಾಗಲು ನಿರಾಕರಿಸಿದ ಆತ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿಯಾಗಿ ಯೋಧರು ನಡೆಸಿದ ಗುಂಡಿನ ಚಕಮಕಿಯಲ್ಲಿ ಲತೀಫ್ ಹತನಾಗಿದ್ದಾನೆ. ಸ್ಥಳದಲ್ಲಿ ಇತರ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಿಜೂರಾಮ್ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಗಳ ಸುಲಭ ಗೆಲುವು ಜಿಪುಣನಾಗಿ ಮೃತಪಟ್ಟವನ ಬ್ಯಾಂಕ್ ನಲ್ಲಿತ್ತು 70 ಲಕ್ಷ ರೂ. : ಚಿಕಿತ್ಸೆಗೂ ಹಣ ಬಳಸದೆ ದುರಂತ ಅಂತ್ಯನಾನು ದೇವರನ್ನು ಪೂಜೆ ಮಾಡಲ್ಲ. ಆಗಂತ ದೇವರಿಲ್ಲ ಅಂತ ಹೇಳಲ್ಲ : ಸಿದ್ದರಾಮಯ್ಯ ಪೆಟ್ರೋಲ್ ನಲ್ಲಿ ಮಾತ್ರ ಎಥೆನಾಲ್ ಮಿಕ್ಸ್ ಮಾಡುತ್ತಿದ್ದೇವೆ : ಮುರುಗೇಶ್ ನಿರಾಣಿಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಗ್ರ ಲತೀಫ್ ಭಟ್ ಎನ್ ಕೌಂಟರ್ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿ:  ಕಬ್ಬು ಬೆಳೆಗಾರರಿಗೆ ಬಂಪರ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್ ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್ ನಾಳೆಯಿಂದ ಆರಂಭಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಆಹ್ವಾನ : ರಾಜಾ ವೆಂಕಟಪ್ಪನಾಯಕಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ : ನಾಲ್ವರು ಅಂತರರಾಜ್ಯ ಯುವತಿಯರ ರಕ್ಷಣೆ