LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ರಷ್ಯಾದಲ್ಲಿ ಮಿಲಿಟರಿ ವಿಮಾನ ಪತನ : 17 ಮಂದಿ ಸಜೀವ ದಹನ 

Advertisement

ಮಾಸ್ಕೋ: ರಷ್ಯಾದಲ್ಲಿ ಮಿಲಿಟರಿ ಸಾರಿಗೆ ವಿಮಾನವೊಂದು ಆಕಾಶದಿಂದ ಬೆಂಕಿಯ ಉಂಡೆಯಂತೆ ಧರೆಗುರುಳಿದ ಭೀಕರ ಘಟನೆ ನಡೆದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಮಾನ ನೆಲಕ್ಕೆ ಅಪ್ಪಳಿಸುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ತೀವ್ರ ಆತಂಕ ಮೂಡಿಸಿದೆ.

ರಷ್ಯಾದ ನೈಋತ್ಯ ಸೈಬೀರಿಯಾದ ಕೆಮೆರೊವೊ ಪ್ರದೇಶದ ಯಾಗುನೊವೊ ಗ್ರಾಮದ ಸಮೀಪ ಮಂಗಳವಾರ ಈ ವಿಮಾನ ದುರಂತ ಸಂಭವಿಸಿದೆ. ಕೆಮೆರೊವೊ ಪ್ರದೇಶದ ಗವರ್ನರ್ ಇಲ್ಯಾ ಸೆರೆದ್ಯುಕ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಮಿಲಿಟರಿಗೆ ಸೇರಿದ An-12 ಸಾರಿಗೆ ವಿಮಾನ ಎನ್ನಲಾಗಿದೆ. ವಿಮಾನದಲ್ಲಿದ್ದ 17 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ಇಜ್ವೆಸ್ತಿಯಾ ಮಾಧ್ಯಮ ವರದಿ ಮಾಡಿದೆ.

ಬೆಂಕಿಯಲ್ಲಿ ಹೊತ್ತಿ ಉರಿಯುತ್ತಾ ನೆಲಕ್ಕೆ ಅಪ್ಪಳಿಸಿದ ವಿಮಾನ

ಮನೆಯೊಂದರ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ವಿಮಾನ ಆಕಾಶದಿಂದ ವೇಗವಾಗಿ ಕೆಳಕ್ಕೆ ಧುಮುಕುತ್ತಿರುವುದು ಕಂಡುಬಂದಿದೆ. ಕೆಲವೇ ಕ್ಷಣಗಳಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿ ಭಾರೀ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಿಜೂರಾಮ್ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಗಳ ಸುಲಭ ಗೆಲುವು ಜಿಪುಣನಾಗಿ ಮೃತಪಟ್ಟವನ ಬ್ಯಾಂಕ್ ನಲ್ಲಿತ್ತು 70 ಲಕ್ಷ ರೂ. : ಚಿಕಿತ್ಸೆಗೂ ಹಣ ಬಳಸದೆ ದುರಂತ ಅಂತ್ಯನಾನು ದೇವರನ್ನು ಪೂಜೆ ಮಾಡಲ್ಲ. ಆಗಂತ ದೇವರಿಲ್ಲ ಅಂತ ಹೇಳಲ್ಲ : ಸಿದ್ದರಾಮಯ್ಯ ಪೆಟ್ರೋಲ್ ನಲ್ಲಿ ಮಾತ್ರ ಎಥೆನಾಲ್ ಮಿಕ್ಸ್ ಮಾಡುತ್ತಿದ್ದೇವೆ : ಮುರುಗೇಶ್ ನಿರಾಣಿಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಗ್ರ ಲತೀಫ್ ಭಟ್ ಎನ್ ಕೌಂಟರ್ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿ:  ಕಬ್ಬು ಬೆಳೆಗಾರರಿಗೆ ಬಂಪರ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್ ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್ ನಾಳೆಯಿಂದ ಆರಂಭಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಆಹ್ವಾನ : ರಾಜಾ ವೆಂಕಟಪ್ಪನಾಯಕಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ : ನಾಲ್ವರು ಅಂತರರಾಜ್ಯ ಯುವತಿಯರ ರಕ್ಷಣೆ