ಮುಂಬೈ : ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan)ಅವರ ಮುಂಬೈ ನಿವಾಸ ಜಲ್ಸಾ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇತ್ತೀಚೆಗೆ ಸರಣಿ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
ಈ ನಡುವೆ, ಖಲಿಸ್ತಾನಿ ಪ್ರತ್ಯೇಕತಾವಾದಿ (Khalistan)ನಾಯಕ ಹಾಗೂ ಕೆನಡಾ ಮೂಲದ ಗುರುಪತ್ವಂತ್ ಸಿಂಗ್ ಪನ್ನೂನ್ (Gurpatwant Singh Pannun)ಮತ್ತೊಮ್ಮೆ ಅಮಿತಾಭ್ ಬಚ್ಚನ್‌ಗೆ ಬೆದರಿಕೆ(threat) ಹಾಕಿದ್ದಾನೆ ಎನ್ನಲಾಗಿದೆ.
ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ನವೆಂಬರ್ 19ರಿಂದ 27ರವರೆಗೆ ಅಮಿತಾಭ್ ಬಚ್ಚನ್ ಅವರ ನಿವಾಸ (residence)ಜಲ್ಸಾಎದುರು ಬೆಂಬಲಿಗರು ಜಮಾಯಿಸುವಂತೆ ಕರೆ ನೀಡಲಾಗಿದೆ ಎಂದು ವರದಿಯಾಗಿದೆ.
ಅಮಿತಾಭ್ ಬಚ್ಚನ್‌ಗೆ ಬೆದರಿಕೆ: ₹11 ಲಕ್ಷ ಬಹುಮಾನ ಘೋಷಣೆ!
ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪನ್ನೂನ್, 'ಬಚ್ ಗಯೇ ಯಾ ಫಸ್ ಗಯೇ' (ಬಚಾವಾದಿರಾ ಅಥವಾ ಸಿಕ್ಕಿಬಿದ್ದಿರಾ?) ಎಂಬರ್ಥದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಅಮಿತಾಭ್ ಬಚ್ಚನ್ ಅವರ ನಿವಾಸದ ಮುಂದೆ 'ಖಲಿಸ್ತಾನ್ ಜಲ್ಸಾ' ಹೆಸರಿನಲ್ಲಿ ಒಗ್ಗೂಡುವ ಬೆಂಬಲಿಗರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ ಎಂದು ವರದಿಯಾಗಿದೆ.
1984ರ ಅಕ್ಟೋಬರ್ 31ರಂದು ಮುಂಬೈ ಸೇರಿದಂತೆ ವಿವಿಧೆಡೆ ನಡೆದ ಸಿಖ್ ವಿರೋಧಿ ಹಿಂಸಾಚಾರವನ್ನು ಪ್ರಸ್ತಾಪಿಸಿರುವ ಈ ಪೋಸ್ಟ್, ಆ ಘಟನೆಯ ನೆನಪನ್ನೂ ಉಲ್ಲೇಖಿಸಿದೆ ಎನ್ನಲಾಗಿದೆ.


