ಹೋಬಾರ್ಟ್ ( ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 3 ನೇ ಹಾಗೂ ಕೊನೆಯ ಏಕದಿನ ಪಂದ್ಯ ನಾಳೆ ಇಲ್ಲಿ ನಡೆಯಲಿದೆ.
ಇಲ್ಲಿನ ನಿಂಜಾ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮುಂಜಾನೆ 9 ಕ್ಕೆ ಪಂದ್ಯ ಆರಂಭವಾಗಲಿದೆ. ಮೊದಲ 2 ಪಂದ್ಯಗಳ ಪೈಕಿ ತಲಾ 1 ಪಂದ್ಯದಲ್ಲಿ ಎರಡೂ ತಂಡಗಳು ಜಯ ಸಾಧಿಸಿದ್ದು, ಉಭಯ ತಂಡಗಳಿಗೆ ನಾಳಿನ ಪಂದ್ಯ ನಿರ್ಣಾಯಕ ಪಂದ್ಯ ಆಗಲಿದೆ.


