ಮುಂಬೈ: ಕರ್ನಾಟಕ ಹಾಗೂ ಮಿಜೊರಾಮ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಸೈಯದ್ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ- 20 ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕದ 3 ನೇ ಲೀಗ್ ಪಂದ್ಯ ನಡೆಯಲಿದೆ.
ಪಂದ್ಯ ಸಾಯಂಕಾಲ 4:30 ಕ್ಕೆ ಶುರುವಾಗಲಿದೆ. ಮೊದಲ 2 ಲೀಗ್ ಪಂದ್ಯಗಳಲ್ಲಿ ಕರ್ನಾಟಕ 1 ಪಂದ್ಯದಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತಿದೆ.


