LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದಸರಾ ಕಂಬಳದ ಸೆಲ್ಫಿ ವಿಡಿಯೋ ಮಾಡಿದ ಡಿಕೆ ಶಿವಕುಮಾರ್ : 'ಸಿಎಂ ವ್ಲೊಗ್ ಸೋ ಕ್ಯೂಟ್

Advertisement

ಮೈಸೂರು : ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿ ಭಾಗದ ಐತಿಹಾಸಿಕ ಕಂಬಳ ಓಟಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು.

ಈ ವಿಶೇಷ ಕ್ಷಣದಲ್ಲಿ ಕಂಬಳದ ರೋಮಾಂಚನಕಾರಿ ದೃಶ್ಯಗಳನ್ನು ತಾವೇ ಸ್ವತಃ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮೂಲಕ ಸೆರೆಹಿಡಿದು ಗಮನ ಸೆಳೆದರು.

ನಂತರ ಈ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, "ಓಟದ ಭರದಲ್ಲಿ ಸಿಡಿದೇಳುವ ಮಣ್ಣಿನ ಕಂಪು, ದಿಗ್ವಿಜಯದತ್ತ ಮುನ್ನುಗ್ಗುವ ಕೋಣಗಳ ವೀರಾವೇಶ! ನಮ್ಮ ಅಪ್ಪಟ ದೇಸಿ ಸೊಗಡನ್ನು ಕಣ್ತುಂಬಿಕೊಳ್ಳುವಾಗ ಸಿಕ್ಕ ಆನಂದವೇ ಅನನ್ಯ" ಎಂದು ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಗಳ ಈ ಸರಳತೆ ಹಾಗೂ ಕಂಬಳದ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, "ಸಿಎಂ ಅವರ ವ್ಲೋಗಿಂಗ್ ಸೋ ಕ್ಯೂಟ್" ಎಂದು ಒಬ್ಬರು ಪ್ರಶಂಸಿಸಿದರೆ, ಮತ್ತೊಬ್ಬರು "ಭಾರತದಲ್ಲಿ ಬೆಸ್ಟ್ ಸಿಎಂ" ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. 

ಸಾಂಸ್ಕೃತಿಕ ಕ್ರೀಡೆಯನ್ನು ಹತ್ತಿರದಿಂದ ಅನುಭವಿಸಿ, ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿರುವ ಡಿಕೆಶಿ ಅವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ