Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪ್ಪಯ್ಯ ಸ್ವಾಮಿಗಳ ಶತಮಾನೋತ್ಸಕ್ಕೆ ಹಿರಿದು ಬರುತ್ತಿದೆ ದೇಣಿಗೆ 

Advertisement

ಅಥಣಿ :ತಾಲೂಕಿನ ಐಗಳಿ  ಗ್ರಾಮ ದೇವರು ಮಹಾತಪಸ್ವಿ  ಶಿವಯೋಗಿ ಶ್ರೀ ಅಪ್ಪಯ್ಯ ಸ್ವಾಮಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ   ಜರಗಲಿದ್ದು ಈ ಕಾರ್ಯಕ್ರಮದ ನಿಮಿತ್ಯವಾಗಿ ಶ್ರೀ ಅಪ್ಪಯ್ಯ ಮಹಾ ಸ್ವಾಮಿಗಳ ಭವ್ಯವಾದ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಂಗಲ ಕಾರ್ಯಲಯ ಮತ್ತು ಕುಸ್ತಿ ಪಳಿ  ನಿರ್ಮಾಣದ  ನೀಲಿ ನಕ್ಷೆ ಸಿದ್ದವಾಗಿದೆ ಡಾ. ಪರಮ ಪುಜ್ಯ ಶ್ರೀ ಅಲ್ಲಮಪ್ರಭು  ಮಹಾಸ್ವಾಮಿಗಳು ಪಿಠಾಧಿಪತಿಗಳು  ರುದ್ರಾಕ್ಷಿಮಠ ನಾಗನೂರ(ತುಬಚಿ). ಇವರ  ಮಾರ್ಗದರ್ಶನದಲ್ಲಿ ಕಾರ್ಯ ಪ್ರಾರಂಭವಾಗಿದ್ದು  ಈ ಕಾರ್ಯಕ್ರಮಕ್ಕೆ ಒಂದು ವರ್ಷ ಸಮಯವಿದ್ದರೂ ಸಹಿತ ಗ್ರಾಮದಲ್ಲಿ ಈಗಾಗಲೇ ಶತಮಾನೋತ್ಸವದ ಹಬ್ಬ ಮನೆ ಮಾಡಿದೆ  ಕಾರ್ಯಕ್ರಮದ ಅಂಗವಾಗಿ ದೇಣಿಗೆ ಸಂಗ್ರಹ ಪ್ರಾರಂಭವಾಗಿದ್ದು ಗ್ರಾಮದಲ್ಲಿ ಈಗಾಗಲೇ ಒಂದು ಕೋಟಿಗಿಂತ ಅಧಿಕವಾಗಿ  ದಾನಿಗಳಿಂದ  ದೇಣಿಗೆ ಸಂಗ್ರವಾಗಿದೆ. 
 

ಮನೆಯ ಮಕ್ಕಳ ಕೈಯಲ್ಲಿ ೧೦ ರೂ ನೀಡಲು ಹಿಂದೆ ಮುಂದೆ  ನೋಡುವ ಸಮಯದಲ್ಲಿ  ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ತಮ್ಮ ಶಕ್ತಿ ಮೀರಿ ದೇಣಿಗೆ ನೀಡುತ್ತಿದ್ದು 11,000 ದಿಂದ 11 ಲಕ್ಷದವರೆಗೆ ದೇಣಿಗೆ  ನೀಡಿದ್ದಾರೆ  .ಪ್ರತಿಯೊಂದು ಮನೆ ಮನೆಗೆ  ಸೇವಕರು  ಹೋಗಿ  ಅಪ್ಪಯ್ಯ ಸ್ವಾಮಿಗಳ ಒಂದು ಪೋಟೋ ಮತ್ತು ಒಂದು  ಇಬೂತಿ ಉಂಡಿ ನೀಡಿ ಅವರು ಕೊಟ್ಟಸ್ಟು  ದೇಣಿಗೆ ಪಡೆದು ಅಧಿಕೃತ ರಸೀದಿ ನೀಡುತ್ತಿದ್ದಾರೆ .ಸೇವಕರು  ಮನೆಗೆ ಹೊದ ಸಂದರ್ಭದಲ್ಲಿ ನಮ್ಮ  ಮನೆಗೆ ಶ್ರೀ ಅಪ್ಪಯ್ಯ ಸ್ವಾಮಿಗಳೇ ಬಂದಿದ್ದಾರೆ ಅನ್ನುವ ರೀತಿಯಲ್ಲಿ ಗ್ರಾಮಸ್ಥರು   ಸ್ವಾಗತಸಿ  ಅವರಿಗೆ  ಪ್ರಸಾದ ಹಾಗೂ  ನಾಷ್ಟಾ ಮಜ್ಜಿಗೆ ನೀರು  ವ್ಯವಸ್ಥೆ ಮಾಡುತ್ತಿರುವುದು ಸೇವಕರಿಗೆ ಮತ್ತಷ್ಟು ಉತ್ಸಾಹ ತುಂಬಿದೆ ದೇಣಿಗೆ ಹಣವು  ಶ್ರೀ ಅಪ್ಪಯ್ಯಸ್ವಾಮಿ ಸೇವಾ ಸಮಿತಿಯ  ಟ್ರಸ್ಟಗೆ   ಜಮಾ ಆಗುತ್ತಿದೆ. ಈ ಇತಿಹಾಸಿಕ ಕಾರ್ಯಕ್ರಮಕ್ಕೆ ನಾವೇಲ್ಲ   ಸಾಕ್ಷಿ ಆಗೋಣ ಎಂದು   ಗ್ರಾಮಸ್ಥರು ಹಾರೈಸುತ್ತಿದ್ದಾರೆ.

ದೇಣಿಗೆ ನೀಡುವವರು  90086 03430/9731039700  ಇವರನ್ನು  ಸಂಪರ್ಕಿಸಿ

ವರದಿ:ಆಕಾಶ ಮಾದರ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ಯೂಷನ್ ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಸಚಿವ ಡಾ. ಶರಣಾಪ್ರಕಾಶ್ ಪಾಟೀಲ್ ತವರೂರಲ್ಲೇ ಕಳಪೆ ಮಟ್ಟದ ಡಾಂಬರೀಕರಣ ರಸ್ತೆ ನಿರ್ಮಾಣಕೃಷ್ಣಾ ಮೇಲ್ದಂಡೆ ಯೋಜನೆಯ (UKP) ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪರಿಶೀಲನ ಸಭೆ  ಅಪ್ಪಯ್ಯ ಸ್ವಾಮಿಗಳ ಶತಮಾನೋತ್ಸಕ್ಕೆ ಹಿರಿದು ಬರುತ್ತಿದೆ ದೇಣಿಗೆ  ಸಿಗ್ನಲ್ ಗಳು ಇಲ್ಲದೆ ಟ್ರಾಫಿಕ್ ಜಾಮ್ ಆಗುತ್ತಿರುವ  ಮುಖ್ಯ ರಸ್ತೆಗಳುದೆಹಲಿ ಕ್ಯಾಪಿಟಲ್ಸ್ಗೆ ೪೦ ರನ್‌ಗಳ ಸುಲಭ ಜಯಕೇಂದ್ರ ಸರ್ಕಾರ ಸರಣಿ ಶಾಕ್ : ಪೆಟ್ರೋಲ್ 2.61 ರೂ. ಹಾಗೂ ಡೀಸೆಲ್ 2.71 ರೂ. ಹೆಚ್ಚಳಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್​​​​ಗೆ ಹೈಕಮಾಂಡ್​ನಿಂದ ಬುಲಾವ್ 22 ವರ್ಷಕ್ಕೆ ಐದು ಮಕ್ಕಳ ತಾಯಿ : ಗಂಡನ ಆಸೆಗೆ ಭಾರಿ ಆಕ್ರೋಶ ಭಾರತದಲ್ಲಿ ವಿಶ್ವಕಪ್ ಫುಟ್‌ಬಾಲ್ ನೇರ ಪ್ರಸಾರ