ಹುಮನಾಬಾದ: ಸಿದ್ದರಾಮಯ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ ಡಾ.ಎಚ್.ಸಿ ಮಹಾದೇವಪ್ಪ ಅವರಿಗೆ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ದಲಿತರ ಮನ ನೋಯಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಬು ಟೈಗರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಬು ಟೈಗರ್ ,ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಗಲಿಗೆ ಹೆಗಲು ನೀಡಿದ ದಲಿತ ನಾಯಕ ಎಚ್.ಸಿ ಮಹಾದೇವಪ್ಪ ಅವರಿಗೆ ಪ್ರೀಯಾಂಕ ಖರ್ಗೆ, ಯತಿಂದ್ರ ಕ್ಕಿಂತ ಮೊದಲ ಸ್ಥಾನ ನೀಡಬೇಕಾಗಿತ್ತು. ದಲಿತ ಒಕ್ಕೂಟ ಹಾಗೂ ಅಹಿಂದ ಒಕ್ಕೂಟಕ್ಕೆ ಮನ ನೋವಿಸುವ ಕೇಲಸ ಡಿ.ಕೆ ಸರ್ಕಾರದಲ್ಲಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಸರ್ಕಾರದಲ್ಲಿ ಉನ್ನತ ಹುದ್ದೆ ತ್ವೇಜಿಸಿದ ಅವರಿಗೆ ಕೇಳ ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ,ಶೋಷಿತರ ಏಳಿಗೆಗೆ ಹಗಲಿರಳು ಶ್ರಮಿಸಿದ ಹೆಗ್ಗಳಿಕೆ ಅವರದಾಗಿದೆ.ಇಂತಹ ಅನುಭವಿ ನಾಯಕನಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡದಿರುವುದು ದುಃಖಕರ ಸಂಗತಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಡೆದ ಖಂಡನೀಯ ಎಂದು ಹೇಳಿದರು.

