ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಗೆ ಬರುವ ಶಾಂತಿನಗರದ ಮುಖಂಡರಾದ ಸುರೇಶ್, ಶಿವಕುಮಾರ್ ಮೇಟಿ ಹಾಗೂ ಶಾಂತಿನಗರದ ಸಮಸ್ತ ನಾಗರಿಕರವತಿಯಿಂದ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಜೀ ಅವರ ಜನ್ಮದಿನ ಮತ್ತು ಬಸವ ಜಯಂತಿ ಆಚರಣೆ ಆಯೋಜಿಸಲಾಗಿತ್ತು.
ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಡಾ. ಶಿವಕುಮಾರ ಮಹಾಸ್ವಾಮಿಜೀ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಬಸವೇಶ್ವರರು ೧೨ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವೇಶ್ವರರು(ಬಸವಣ) ಜಾತಿ ಪದ್ದತಿ,ಲಿಂಗ, ತಾರತಮ್ಯ , ಮೂಢನಂಬಿಕೆ ಮತ್ತು ಅಸ್ಪೃಶ್ಯತೆ ವಿರುದ್ಧ ಕ್ರಾಂತಿ ಕಾರಿ ಹೋರಾಟ ನಡೆಸಿದ ಬಸವಣ್ಣನವರು ಅವರ ಆದರ್ಶಗಳು ಮೈಗೂಡಿಸಿ ಕೊಳ್ಳಬೇಕು ಎಂದು ಶಾಸಕ ಎಸ್ ಮುನಿರಾಜು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ವೀರ ಶೈವ ಲಿಂಗಾಯತ ಸಮಾಜದ ಪ್ರಭಾವಿ ಮುಖಂಡ ಜಿ. ಮರಿಸ್ವಾಮಿ ಮಾತನಾಡಿ ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನ (ಆಶ್ರಯ) ದಾಸೋಹದ ಮೂಲಕ ಲಕ್ಷಾಂತರ ಜನರಿಗೆ ಬದುಕು ನೀಡಿದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಊಟ ಒದಗಿಸಿದ ನಡೆದಾಡುವ ದೇವರು ಶ್ರೀ ಡಾ. ಶಿವಕುಮಾರ್ ಮಹಾ ಸ್ವಾಮೀಜಿ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ ಮತ್ತು ಜನ ಪ್ರಿಯ ಸಮಾಜ ಸೇವಕ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಪಾನಕಾ ಕೊಸಂಬರಿ ಮಂಜಿಗೆ ಮತ್ತು ಪ್ರಸಾದ ನಿಯೋಗಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ ಎಂ ಚಿಕ್ಕಣ, ಎಂ.ಎಚ್ ಪಾಟೀಲ್, ಸುರೇಶ್ ದೊಡ್ಡಮನಿ, ಮಂಜಣ್ಣ, ಪ್ರಕಾಶ್, ಬಂಗಾರಪ್ಪ,ಶಿವಣ್ಣ ಯು ಸಿ, ರವಿ ಬಣಗಾರ್, ಗಿರೀಶ್ ಕುಮಾರ್, ಮನೋಹರ್ ಸೇರಿದಂತೆ ಚಿಕ್ಕಬಾಣವಾರ, ಶಾಂತಿನಗರ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದು ಬಸವಣ್ಣನವರ ಮತ್ತು ಡಾ. ಶಿವಕುಮಾರ ಮಹಾಸ್ವಾಮಿಜೀ ಅವರ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಸಲ್ಲಿಸಿ ದರ್ಶನ ಪಡೆದು ತೀರ್ಥ ಪ್ರಸಾದ್ ಸ್ವೀಕರಿಸಿದರು.
ವರದಿ :ಅಯ್ಯಣ್ಣ ಮಾಸ್ಟರ್

