ಕಾಗವಾಡ: ಪಟ್ಟಣಕ್ಕೆ ಹೊಂದಿಕೊಂಡ ಕಾಗವಾಡ- ಇಂಗಳಿ ಹಾಗು ಕಾಗವಾಡ- ಕಲಕೇರಿ ರಸ್ತೆಗಳಿಗೆ ಬಹು ದಿನಗಳಿಂದ ರೈತರ ಬೇಡಿಕೆಯಾಗಿತ್ತು, ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ಇಂದು ಕಾಯಕಲ್ಪ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಮಹಾದೇವ ಕೋಳೆಕರ ಹೇಳಿದರು.


ಅವರು ಬುಧುವಾರ 10ರಂದು ಕಾಗವಾಡ ಪಟ್ಟಣ ಕಾಗವಾಡ- ಇಂಗಳಿಹಾಗೂ ಕಾಗವಾಡ- ಕಲಕೇರಿ ರಸ್ತೆಗಳ ಅಭಿವೃದಿಗೆ ಸನ್ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ವಿಶೇಷ ಅನುದಾನದಲ್ಲಿ ಮಂಜೂರಾದ 50ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ, ಕ್ಷೇತ್ರದ ಎಲ್ಲ ಸಂಪರ್ಕ ರಸ್ತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಮುಂದಿನ ದಿನಮಾನದಲ್ಲಿ ಶಾಸಕ ರಾಜು ಕಾಗೆಯವರು ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು ಗುತ್ತಿಗೆದಾರರು ಮಳಗಾಲ ಇರುವದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದರು. ಇ ಸಂದರ್ಭದಲ್ಲಿ ಮುಖಂಡರಾದ ಚನ್ನಾಗೌಡ ಪಾಟೀಲ,ರಾಜಾಗೌಡ ಪಾಟೀಲ ರಮೇಶ ಚೌಗಲೆ,ಚಿದಾನಂದ ಅವಟಿ ,ಪಿಂಟು ಹವರಿ,ಫಾರೂಕ್ ಅಲಸ್ಕಾರ, ಗಣೇಶ ಕೊಳೆಕರ, ಸಿದ್ದು ಒಡಯರ, ರಾವಸಾಬ ಕೊಳೆಕರ,ಸುರೇಶ ಕೊಳೆಕರ,ಬಾಳು ಕೊಳೆಕರ,ಸುರೇಶ್ ಜಗನಾಡಿ,ರೇವಣ್ಣ ಕೊಳೆಕರ,ಅನಿಲ ಪವಾರ,ಗುತ್ತಿಗೆದಾರ ಸುನೀಲ ಅವಟಿ ಸೇರಿದಂತೆ ಕಾರ್ಯಕರ್ತರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ

