ಗಾಲೆ: ವಿಕೆಟ್ ಕೀಪರ್ ಬ್ಯಾಟರ್ ದ್ರುವ್ ಜುರೆಲ್ ಭಾರತ ಟೆಸ್ಟ್ ತಂಡದಲ್ಲಿ ತನ್ನ ಸ್ಥಾನವನ್ನು ಇನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ.
ದ್ರುವ್ ಜುರೆಲ್ ಈಗ ಟೆಸ್ಟ್ ತಂಡದಲ್ಲಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದಲ್ಲಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ ಜುರೆಲ್ ಈಗ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ೧೧ ರ ಬಳಗದಲ್ಲಿ ಸ್ಥಾನ ಪಡೆಯುವರೋ ಇಲ್ಲವೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸಾಯಿ ಸುದರ್ಶನ ಅವರಿಗೆ ಬದಲಿ ಆಟಗಾರನಾಗಿ ಸರಫರಾಜ್ ಖಾನ್ ಈಗ ಶ್ರೀಲಂಕಾಕ್ಕೆ ತೆರಳಿದ್ದು, ಸರಫರಾಜ್ ಖಾನ್ ಹಾಗೂ ದ್ರುವ್ ಜುರೆಲ್ ನಡುವೆ ಆಡುವ ೧೧ ರ ಬಳಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಟ್ಟಿದೆ.
ದ್ರುವ್ ಜುರೆಲ್ ಹಾಗೂ ಸರಫರಾಜ್ ಖಾನ್ ಇಬ್ಬರ ಕಥೆಯೂ ವಿಭಿನ್ನ, ದ್ರುವ್ ಜುರೆಲ್ ಸಿಕ್ಕ ಅವಕಾಶಗಳನ್ನು ಬಳಸಿಕೊಂಡಷ್ಟು ಸರಫರಾಜ್ ಖಾನ್ ಬಳಸಿಕೊಂಡಿಲ್ಲ. ಎರಡು ವರ್ಷಗಳ ಹಿಂದೆ ಇಂಗ್ಲೆAಡ್ ವಿರುದ್ಧ ರಾಜಕೋಟ್ ಟೆಸ್ಟ್ನಲ್ಲಿ ಇಬ್ಬರು ಚೊಚ್ಚಲ ಪಂದ್ಯ ಆಡಿದ್ದರು. ಇದೀಗ ಆಡುವ ೧೧ ರ ಬಳಗದಲ್ಲಿ ಸ್ಥಾನ ಪಡೆಯಲು ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.


