ಲಕ್ನೋ: ಪಂಜಾಬ್ ಕಿಂಗ್ಸ್ ತಂಡಕ್ಕೆ ಅಂದುಕೊAಡAತೆ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ೭ ವಿಕೆಟ್‌ಗಳ ಸುಲಭ ಗೆಲುವು ಸಿಕ್ಕಿದೆ. ಪಾಯಿಂಟ್ ಪಟ್ಟಿಯಲ್ಲಿ ಸದ್ಯಕ್ಕೆ ೪ ನೇ ಸ್ಥಾನಕ್ಕೂ ತಲುಪಿದೆ.
ಪ್ಲೇ ಆಪ್ ಎಂಟ್ರಿಗೆ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿಯೇ ಉಳಿದುಕೊಳ್ಳುವುದರ ಅಗತ್ಯವಿದೆ. ಆದರೆ ಇಂದು ಮಧ್ಯಾಹ್ನ ೩:೩೦ ಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿರುವ ರಾಜಸ್ತಾನ್ ರಾಯಲ್ಸ್ ಸೋತರೇ ಹಾಗೂ ಸಾಯಂಕಾಲ ನಡೆಯುವ ಪಂದ್ಯದಲ್ಲಿ ಕೆಕೆಆರ್ ಸೋತರೇ ಪಂಜಾಬ್ ಕಿಂಗ್ಸ್ ಪ್ಲೇ ಹಂತ ತಲುಪುವುದು.
ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕೆ ಇಳಿದಿದ್ದ ಪಂಜಾಬ್ ಕಿಂಗ್ಸ್ ತಂಡವು ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಯತ್ನಿಸಿದರೂ ಪ್ರತಿಫಲ ಸಿಗಲಿಲ್ಲ. ಪಂಜಾಬ್ ಕಿಂಗ್ಸ್ ತಂಡಕ್ಕೆ ಅರ್ಷದೀಪ್ ಸಿಂಗ್ ದುಬಾರಿ ಬೌಲರ್ ಎನಿಸಿದರು. ಅವರು ೩ ಓವರುಗಳಲ್ಲಿ ೫೨ ರನ್ ನೀಡಿದರು.
ಸ್ಕೋರ್ ವಿವರ
ಲಕ್ನೋ ಸೂಪರ್ ಜೇಂಟ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೯೬
ಜೋಷ್ ಇಂಗ್ಲೀಷ್ ೭೨ ( ೪೪ ಎಸೆತ, ೯ ಬೌಂಡರಿ, ೨ ಸಿಕ್ಸರ್)
ಆಯುಷ್ ಬದೋನಿ ೪೩ (೧೮ ಎಸೆತ, ೫ ಬೌಂಡರಿ, ೩ ಸಿಕ್ಸರ್)
ರಿಷಬ್ ಪಂತ್ ೨೬ (೨೨ ಎಸೆತ, ೩ ಬೌಂಡರಿ)
ಅಬ್ದುಲ್ ಸಾಮದ ೩೭ (೨೦ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಪಂಜಾಬ್ ಕಿಂಗ್ಸ್ ೧೮ ಓವರುಗಳಲ್ಲಿ ೩ ವಿಕೆಟ್‌ಗೆ ೨೦೦
ಶ್ರೇಯಸ್ ಅಯ್ಯರ್ (ಅಜೇಯ) ೧೦೧ (೫೧ ಎಸೆತ, ೧೧ ಬೌಂಡರಿ, ೫ ಸಿಕ್ಸರ್)
ಪ್ರಭಸಿಮರನ್ ಸಿಂಗ್ ೬೯ (೩೯ ಎಸೆತ, ೭ ಬೌಂಡರಿ, ೨ ಸಿಕ್ಸರ್)

