ಅರಸಿಕೆರೆ : ರಾಜ್ಯದಲ್ಲಿ ಇತ್ತೀಚೆಗೆ ಮಳೆಯಾಗುತ್ತಿದ್ದರು, ರೈತರು ಮುಂಗಾರು ಬಿತ್ತನೆಯಲ್ಲಿ ವಿಫಲವಾಗಿದ್ದು ರೈತನು ಧೃತಗಿಡುತ್ತಿದ್ದಾನೆ ಇಂತಹ ಸಮಯದಲ್ಲೂ ರೈತರಿಂದ ನೆಪೆಡ್ ಮೂಲಕ ರಾಗಿ ಖರೀದಿಯು ಏಪ್ರಿಲ್ 30ಕ್ಕೆ ಮುಗಿದಿದ್ದರೂ, ಖರೀದಿಯೂ ಅಂತ್ಯಗೊಂಡು ಎರಡು ತಿಂಗಳು ಮುಗಿದು ಜುಲೈ ತಿಂಗಳು ಅರ್ಧ ತಿಂಗಳು ಅಂತ್ಯವಾಗುತ್ತಿದೆ ಆದರೂ ರೈತರಿಗೆ ರಾಗಿ ಖರೀದಿ ಹಣವನ್ನು ಅವರ ಖಾತೆಗಳಿಗೆ ಮಾರ್ಚ್ 5 ನೇ ತಾರೀಕು ವರೆಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ.ರೈತರು ಮತ್ತೊಮ್ಮೆ ರಾಗಿ ಬಿತ್ತನೆ ಮಾಡಲು ಭೂಮಿಯನ್ನು ಹ ದಗೊಳಿಸಿ ಮಳೆ ಕಾಯುತ್ತಿದ್ದಾರೆ ಈ ಸಾರಿ ಬಿತ್ತನೆಗೆ ಗೊಬ್ಬರ ಖರೀದಿ ಮಾಡಲು ಮತ್ತು ತಮ್ಮ ಜೀವನವನ್ನು ನಡೆಸಲು ರಾಗಿ ಹಣವನ್ನೇ ಜಾತಕ ಪಕ್ಷಿಗಳ ತರ ಕಾಯುತ್ತಿದ್ದಾರೆ.
ಆದರೆ ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಸರ್ಕಾರವು ಈ ವಿಚಾರಕ್ಕೆ ಕಿವಿಗೊಡದೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಒಂದು ತಿಂಗಳ ಆಡಳಿತದ ಸಾಧನೆಯನ್ನು ಪ್ರಕಟಿಸಿಕೊಂಡು, ತನ್ನ ಮಂತ್ರಿಮಂಡಲ ರಚನೆಗೆ ಆಸಕ್ತಿ ವಹಿಸಿಕೊಂಡು, ಕೆಲಸಕ್ಕೆ ಬಾರದ ಆರ್ ಎಸ್ ಎಸ್ ವಿಚಾರವಾಗಿ, ಬೇಕಾ ಬೇಡವಲ್ಲದ ವಿಚಾರವಾಗಿ ಹೇಳಿಕೆಯನ್ನು ಕೊಡುತ್ತಾ ಸರ್ಕಾರವು ಸರ್ಕಾರವು ಜನರನ್ನು ದಾರಿ ತಪ್ಪಿಸುತ್ತ, ರೈತರ ನೆರವಿಗೆ ಬಾರದೆ, ಕಲ್ಪತರು ನಾಡಾದ ಅರಸೀಕೆರೆ ತಿಪಟೂರು, ತುಮಕೂರು ಕಡೂರು ಭಾಗಗಳಲ್ಲಿ ತೆಂಗು ರೋಗಪೀಡಿತವಾಗಿ ನಶಿಸಿಹೋಗಿತ್ತಿರುವ ಸಮಯದಲ್ಲಿ, ಹಾಗೂ ಇಳುವರಿಯಲ್ಲಿ ಕುಂಟಿತವಾಗಿ ರೈತರು ಐರಣ್ಣಾಗಿದ್ದಾರೆ, ಇದನ್ನೆಲ್ಲ ಮನಗೊಂಡು ಸರ್ಕಾರವು ರೈತರು ಬಿಟ್ಟಿರುವ ರಾಗಿ ಹಣವನ್ನು ಅಂತಂತವಾಗಿ ಬಿಡುಗಡೆ ಮಾಡದೆ ಒಂದೇ ಬಾರಿ ಎಲ್ಲಾ ರೈತರ ಹಣವನ್ನು ಬಿಡುಗಡೆ ಮಾಡಬೇಕೆಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷರಾದ ರಮೇಶ್ ದುಮ್ಮೇನಹಳ್ಳಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಲ್ಲವಾದರೆ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ರೈತರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ... ಈ ವಿಚಾರವಾಗಿ ಮಾನ್ಯ ಶಾಸಕರಾದ ಸನ್ಮಾನ್ಯ ಶಿವಲಿಂಗೇಗೌಡರು ತಮಗೆ ಮಂತ್ರಿ ಗಿರಿ ತರುವುದರಲ್ಲಿ ತಲ್ಲಿನರಾಗಿರುವುದನ್ನು ಬಿಟ್ಟು, ಉನ್ನತ ನಾಯಕರನ್ನು ಭೇಟಿ ಮಾಡುವುದರ ಬದಲಿಗೆ ರೈತರ ರಾಗಿ ಖರೀದಿ ಹಣದ ಬಿಡುಗಡೆಗೆ ಹೋರಾಡಬೇಕಾಗಿ ವ ತ್ತಾಯಿಸಿದ್ದಾರೆ ರಮೇಶ್ ದುಮ್ಮೇನಹಳ್ಳಿ ಮಾಜಿ ತಾಲೂಕ್ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ.
ವರದಿ : ರಾಜು


