Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದು ದಿನಕ್ಕೆ ನನ್ನನ್ನು ಬಾಡಿಗೆ ಪಡೆಯಬಹುದು : ಇನ್ಸಾಟ್ ದಲ್ಲಿ ದರ ನಿಗದಿ ಮಾಡಿದ ಯುವತಿ

Advertisement

ಕಷ್ಟ ಪಟ್ಟು ದುಡಿಯೋರಿಗಿಂತ ಸುಲಭದಲ್ಲಿ ಹಾದಿಯಲ್ಲಿ ಹಣ (money) ಹೇಗೆ ಮಾಡ್ಬಹುದು ಎಂದು ಯೋಚಿಸುವವರೇ ಹೆಚ್ಚು. ಹೀಗಾಗಿ ಕೆಲವರು ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ಪಂಗನಾಮ ಹಾಕಿ ಬಿಡ್ತಾರೆ.

ಆದರೆ ಇದೆಲ್ಲದರ ನಡುವೆ ಯುವತಿಯೊಬ್ಬಳು ದುಡ್ಡು ಮಾಡಲು ಒಳ್ಳೆಯ ಉಪಾಯ ಕಂಡುಕೊಂಡಿದ್ದಾಳೆ.

ಬ್ಯಾಚುಲರ್ಸ್ ಗಳಿಗೆ ಒಂದೊಳ್ಳೆ ಆಫರ್ ನೀಡಿದ್ದಾಳೆ. ಹೌದು, ತನ್ನ ದಿನದ ಸಮಯವನ್ನು ನಿಮಗಾಗಿ ಮೀಸಲಿಡುವೆ, ಆದರೆ ನೀವು ನನಗೆ ಇಂತಿಷ್ಟು ಹಣ ಪಾವತಿಸಬೇಕು ಎಂದಿದ್ದಾಳೆ. ಈ ಯುವತಿಯ ಈ ಜಾಹೀರಾತಿನ (advertisement) ಪೋಸ್ಟ್ ಸದ್ಯ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ನಳಿನಿ ಉನಾಗರ್ (Nalini Unagar) ತಮ್ಮ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ನನ್ನನ್ನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ಪಡೆಯಬಹುದು ಎಂದು ಉಲ್ಲೇಖಿಸಿದ್ದಾಳೆ.

ಪ್ರೀತಿ ಪ್ರೇಮ ಎನ್ನುವವರಿಗೆ ಈ ವಿಶೇಷ ಆಫರ್ ಇಲ್ಲ. ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಹಾಗೂ ಹೊರಗಿನ ಕಾರ್ಯಕ್ರಮಗಳಿಗೆ ಹೋಗಲು ಮಾತ್ರ ಎಂದು ಹೇಳಿದ್ದಾಳೆ.

ನೀವು ಒಂದು ದಿನದ ಸಂಗಾತಿಯಾಗಿ ಇರುವೆ. ಕಾಫಿ ಕುಡಿಯುವುದು, ಸಿನಿಮಾ ನೋಡುವುದು, ಶಾಪಿಂಗ್, ಕುಟುಂಬದ ಸಮಾರಂಭಗಳಿಗೆ ಹಾಜರಾಗುವುದು, ಹೊಸ ಸ್ಥಳಗಳನ್ನು ಸುತ್ತಾಡುವುದು ಹಾಗೂ ಸುಮ್ಮನೆ ಮಾತನಾಡಲು ಒಬ್ಬರು ಬೇಕು ಎನ್ನುವವರು ತನ್ನನ್ನು ಸಂಪರ್ಕ ಮಾಡಬಹುದು ಎಂದು ಬರೆದಿರುವುದನ್ನು ಕಾಣಬಹುದು.

ಅಲ್ಲದೇ ದಿನನಿತ್ಯದ ಚಟುವಟಿಕೆಯಲ್ಲಿ ನಾನು ನಿಮ್ಮ ಜತೆಗೆ ಇರಲು ಎಷ್ಟು ಮೊತ್ತ ಆಗುತ್ತದೆ ಎಂದು ಇಲ್ಲಿ ಉಲ್ಲೇಖಿಸಿರುವುದನ್ನು ನೋಡಬಹುದು.

ಜುಲೈ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಎಂಐ ಇದೆಯೇ ಎಂದು ಕೇಳಿದ್ದಾರೆ. 

ಮತ್ತೊಬ್ಬರು, ಜನರು ಜಪಾನಿನಿಂದ ಎಲ್ಲವನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯುವತಿ ನೀಡಿದ ಈ ಆಫರ್ ಹಣ ದುಬಾರಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದು ದಿನಕ್ಕೆ ನನ್ನನ್ನು ಬಾಡಿಗೆ ಪಡೆಯಬಹುದು : ಇನ್ಸಾಟ್ ದಲ್ಲಿ ದರ ನಿಗದಿ ಮಾಡಿದ ಯುವತಿಗೃಹಜ್ಯೋತಿ ಮರುಪರಿಶೀಲನಾ ಸಮೀಕ್ಷೆಗೆ ನಾಗರೀಕರು ಸಹಕರಿಸಿ : ಬೆಸ್ಕಾಂ ಎಇಇ ರಾಜಶೇಖರ್ಡಿಜಿಟಲ್ ಮಿತ್ರ ಬ್ಯಾಚ್‌ನ ಉದ್ಘಾಟನೆ ಮತ್ತು ಐಟಿಸಿಸಿಇ (ITCCE) ಬ್ಯಾಚ್‌ನ ಬೀಳ್ಕೊಡುಗೆ ಸಮಾರಂಭ ಭಯೋತ್ಪಾದನಾ ಪಿತೂರಿ : ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ NIA ದಾಳಿಮೇವು ತರಲು ಹೋಗಿದ್ದ 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಹೆಲ್ಮೆಟ್ ನಿಂದ ಹೊಡೆದು ಪತ್ನಿಯ ಕೊಲೆಗೈದ ಪತಿರೈತರು ಮುಂಗಾರು ಬಿತ್ತನೆಯಲ್ಲಿ ವಿಫಲಬಿಜೆಪಿ ನಾಯಕರಿಗೆ ಸೋಲಿನ ಹತಾಶೆ - ಕಾಂಗ್ರೆಸ್ ಮುಖಂಡ  ಕುಮಟಾಕರ್ ವ್ಯಂಗ್ಯಬೆಳೆ ವಿಮೆ ಪ್ರಚಾರ ಕಾರ್ಯಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆಕೃಷಿ ಪಂಡಿತ ಪ್ರಶಸ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನ