LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಆಸ್ತಿ ಕಲಹ: ಬ್ಯಾಟ್ ನಿಂದ ಹೊಡೆದು ತಂಗಿ ಕೊಲೆಗೈದ ಅಣ್ಣಾ 

Advertisement

ಬೆಂಗಳೂರು: ಆಸ್ತಿ ವಿಚಾರವಾಗಿ ಅಣ್ಣನೇ ತಂಗಿಯನ್ನು ಹೊಡೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಅಣ್ಣ-ತಂಗಿ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಅಣ್ಣ ತನ್ನ ಸ್ವಂತ ತಂಗಿಯ ತಲೆಗೆ ಬ್ಯಾಟ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಈ ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ಘಟನೆ ನಡೆದಿದೆ.

ಮೃತಳನ್ನು 39 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಗಂಡನನ್ನು ಬಿಟ್ಟು ತನ್ನ ಎರಡು ಮಕ್ಕಳ ಜೊತೆ ಮೀನಾಕ್ಷಿ ತವರು ಮನೆ ಸೇರಿದ್ದಳು. 

ಆರೋಪಿ ಜಯರಾಮ್ ಮನೆಯ ಎದುರಿನಲ್ಲೇ ಇದ್ದ ಶೀಟ್ ಮನೆಯಲ್ಲಿ ಮೀನಾಕ್ಷಿ ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಆದರೆ, ತಂಗಿ ಅಲ್ಲಿ ಇರುವುದನ್ನು ಸಹಿಸದ ಅಣ್ಣ ಜಯರಾಮ್, ಮನೆ ಖಾಲಿ ಮಾಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದನು.

ಇಂದು ಬೆಳಗ್ಗೆ ಜಯರಾಮ್ ಪತ್ನಿ ಕಿಟಕಿಯಿಂದ ನೀರು ಎರಚಿದ್ದಾರೆ. ಈ ವಿಚಾರವಾಗಿ ಜಯರಾಮ್ ಪತ್ನಿ ಹಾಗೂ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಚಾರ ತಿಳಿದು ಆಕ್ರೋಶಿತನಾದ ಜಯರಾಮ್ ಏಕಾಏಕಿ ಮೀನಾಕ್ಷಿ ತಲೆಗೆ ಬ್ಯಾಟ್‌ನಿಂದ ಬಲವಾಗಿ ಹೊಡೆದಿದ್ದಾನೆ. 

ಇನ್ನು ಗಂಭೀರವಾಗಿ ಗಾಯಗೊಂಡ ಮೀನಾಕ್ಷಿ ಮೃತಪಟ್ಟಿದ್ದಾಳೆ. ತಾಯಿಯ ಸಾವಿನಿಂದ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂದೂರು ಠಾಣೆ ಪೊಲೀಸರು ಜಯರಾಮ್‌ನನ್ನು ವಶಕ್ಕೆ ಪಡೆದಿದ್ದಾರೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST