ಮುಂಬೈ: ಕರ್ನಾಟಕ ಕ್ರಿಕೆಟ್ ತಂಡವು ಬರೋಡಾ ವಿರುದ್ಧ ಇಂದಿಲ್ಲಿ ನಡೆದ ಸೈಯದ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯದಲ್ಲಿ 8 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಗೆಲ್ಲಲು 119 ರನ್ ಗಳ ಗೆಲುವಿನ ಗುರಿಯನ್ನು ಹೊಂದಿದ್ದ ಕರ್ನಾಟಕ ತಂಡವು 16.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಸುಲಭವಾಗಿ ಗೆಲುವಿನ ಗುರಿ ಸಾಧಿಸಿತು.
ಕರ್ನಾಟಕ ತಂಡವು ಈ ಗೆಲುವಿನೊಂದಿಗೆ 7 ಪಂದ್ಯಗಳಿಂದ 16 ಪಾಯಿಂಟ್ ಪಡೆದಿದ್ದು, ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.
ಸ್ಕೊರ್ ವಿವರ
ಬರೋಡಾ 20 ಓವರ್ ಗಳಲ್ಲಿ 118
ಕರ್ನಾಟಕ 16.1 ಓವರ್ ಗಳಲ್ಲಿ 2 ವಿಕೆಟ್ ಗೆ 120
ಕರುಣ್ ನಯ್ಯರ್ ಅಜೇಯ 30 (20 ಎಸೆತ, 3 ಸಿಕ್ಸರ್)
ರೋಹನ್ ಪಾಟೀಲ್ 48 (42 ಎಸೆತ, 4 ಬೌಂಡ್ರಿ, 3 ಸಿಕ್ಸರ್)

