ಮಂಗಳೂರು: ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ Abdul Kalam) ಅವರು ಸಂಚರಿಸಿದ್ದ ಟಾಟಾ ನ್ಯಾನೋ ಕಾರು ಹಾಗೂ ಅವರು ಬಳಸುತ್ತಿದ್ದ ಪೆನ್ ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಸಿದ್ಧ ಮಂಜೂಷಾ ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರ್ಪಡೆಯಾಗಿದೆ.
ವಾಹನ ಸಂಗ್ರಹಾಲಯಕ್ಕೆ ಹಸ್ತಾಂತರ
ತಮಿಳುನಾಡಿನ ರಾಮೇಶ್ವರಂನಲ್ಲಿರುವ 'ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇಂಟರ್‌ನ್ಯಾಷನಲ್ ಫೌಂಡೇಶನ್' ವತಿಯಿಂದ ಈ ಟಾಟಾ ನ್ಯಾನೋ ಕಾರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಂಜೂಷಾ ವಾಹನ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡುವ ಸಲುವಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಲಾಯಿತು.
ಫೌಂಡೇಶನ್ ಅಧ್ಯಕ್ಷರಾದ ಡಾ. ಎ.ಪಿ.ಜೆ.ಎಂ. ನಜೀಮಾ ಮರೈಕಾಯರ್, ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನುಲಾಬ್ದೀನ್ ಹಾಗೂ ಸಹ-ಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್ ಸಲೀಂ ಅವರು ಅಗತ್ಯ ದಾಖಲೆಗಳೊಂದಿಗೆ ಕಾರು ಮತ್ತು ಪೆನ್ ಅನ್ನು ಹಸ್ತಾಂತರಿಸಿದರು.

