LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡಿ.10ಕ್ಕೆ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ : ಮೃತ್ಯುಂಜಯ ಸ್ವಾಮೀಜಿ

Advertisement

ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಡಿ. 10 ರಂದು ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು, ಸಮಾಜ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೂಡಲಸಂಗ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.ಕೊಪ್ಪಳದ ಪಂಚಮಸಾಲಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

 

ಪಂಚಸಾಲಿ ಮೀಸಲಾತಿ ಚಳವುಳಿ ನಿರಂತರವಾಗಿ ನಡೆದು ಬಂದಿದೆ. ಯಾವುದೇ ಸರ್ಕಾರ ಬರಲಿ, ಯಾವುದೇ ಸಿಎಂ ಬರಲಿ ನಮ್ಮ ಹಕ್ಕು ಈಡೇರುವ ವರೆಗೂ ಪ್ರಾಮಾಣಿಕವಾಗಿ ಹೋರಾಟ ನಡೆಯುತ್ತಾ ಬಂದಿದೆ.

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಅವರು ಸಿಎಂ ಆದ ಬಳಿಕ ಸರ್ಕಾರದ ಗಮನ ಸೆಳೆಯಲು ಡಿ.10 ರಂದು ಸಮಾಜ ಬಾಂಧವರೊಂದಿಗೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.

2024ರಲ್ಲಿ ಡಿ.10 ರಂದು ಮೀಸಲಾತಿಗೆ ಹೋರಾಟ ನಡೆದ ನಮ್ಮ ಸಮುದಾಯದ ಮೇಲೆ ಪೊಲೀಸರು ಲಾಠಿ ಚಾರ್ಜ್ ಆಯಿತು.

 ಜನ ಕಣ್ಣೀರು ಹಾಕಿದರು. ಆ ನೋವಿನ ದಿನವನ್ನು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಎಂದು ತೀರ್ಮಾನಿಸಿದ್ದೇವೆ. ಆ ದಿನದ ಅಂಗವಾಗಿ ಮುಂದಿನ ತಿಂಗಳ ಡಿ.10 ರಂದು ಮತ್ತೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಮನೆಗೊಬ್ಬರಂತೆ, ಊರಿಗೆ ಒಂದು ವಾಹನದಂತೆ ಜನತೆ ಬರಬೇಕು.

 ಕೆಲವರಿಗೆ ಉಪವಾಸ ಮಾಡಲು ಆಗದೇ ಇರುವವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿ ಆದರೆ ಪ್ರಸಾದ ಮಾಡಲಿ. ನಾವು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ನಮ್ಮ ಹೋರಾಟ ಮೀಸಲಾತಿ ಸಿಗುವ ವರೆಗೂ ನಾವು ಹೋರಾಟ ಮಾಡಲಿದ್ದೇವೆ ಎಂದರು.

ಸಿಎಂಗೂ ಮೀಸಲಾತಿಗೆ ಮನವಿ ಮಾಡಿದ್ದೇವೆ. ಸಿಎಂ ಸಹಿತ ಈ ಹಿಂದೆ ನಮಗೆ ಸಮಾಜಕ್ಕೆ ಸ್ಪಂದಿಸುವೆ ಎಂದಿದ್ದರು. ಈಗ ಡಿಕೆಶಿ ಅವರಿಗೆ ಅವಕಾಶ ಸಿಕ್ಕಿದೆ. ಮೀಸಲಾತಿ ಕಲ್ಪಿಸಬೇಕು.

 2ಎಗೆ ನಮ್ಮನ್ನ ಸೇರಿಸಬೇಕು. ಕೇಂದ್ರದಲ್ಲಿ ಅಖಂಡ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಲಿ. ಹಿಂದೆ ಬೊಮ್ಮಾಯಿ ಸರ್ಕಾರ 2ಡಿ ವರ್ಗ ಕೊಟ್ಟಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿದೆ. ಅದನ್ನಾದರೂ ನಮಗೆ ಅನುಷ್ಟಾನ ಮಾಡಬೇಕು. ಉಪವಾಸ ಸತ್ಯಾಗ್ರಹಕ್ಕೆ ಪ್ರತಿಯೊಬ್ಬರೂ ಬರಬೇಕು ಎಂದರು.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸವ ಮಂಟಪ ವಿವಾದ: ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್‌ಗೆ ನಿರೀಕ್ಷಣಾ ಜಾಮೀನು ಡಿ.10ಕ್ಕೆ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ : ಮೃತ್ಯುಂಜಯ ಸ್ವಾಮೀಜಿಮಗಳ ಸಾಧನೆಗೆ ಕಂಬನಿ ಮಿಡಿದ ಅನಕ್ಷರಸ್ಥ ದಂಪತಿಗಳು; BAMS ಪದವಿ ಪಡೆದು ಗ್ರಾಮಕ್ಕೆ ಮರಳಿದ ಮಗಳಿಗೆ ಸ್ವಾಗತ3BHK ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲು 2,53,500 ರೂ. ಖರ್ಚು ಮಾಡಿದ ದಂಪತಿಆಶಾ ಕಾರ್ಯಕರ್ತೆಯರ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆಬರೋಬ್ಬರಿ 19,934 ಕೋಟಿ ಮೊತ್ತದ ಐದು ಮಹತ್ವದ ಯೋಜನೆಗಳಿಗೆ ಅನುಮೋದನೆ ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ: ಅಪರಾಧಿ ಗಿರೀಶ ಸಾವಂತನಿಗೆ ಜೀವಾವಧಿ ಶಿಕ್ಷೆ ತೀರ್ಪುರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಭಾರತೀಯ ಜನತಾ ಪಕ್ಷ ಮಾನ್ವಿ ಮಂಡಲ ವತಿಯಿಂದ ರಾಜ್ಯಪಾಲರಿಗೆ ಮನವಿಸಿಎಂ ಸೂಚನೆ ನೀಡಿದರೂ 20 ದಿನ ಕಳೆದರೂ ಇಳಿಕೆಯಾಗಿಲ್ಲ ಮೊಸರು ಬೆಲೆ