ಬೆಂಗಳೂರು : ಈಗಿನ ದುಬಾರಿ ದುನಿಯಾದಲ್ಲಿ ಬದುಕೋದು ಕಷ್ಟ. ಗಂಡ ಹೆಂಡ್ತಿ ಇಬ್ಬರೂ ದುಡಿದ್ರೂ ದುಡ್ಡು ಉಳಿಯಲ್ಲ. ಹೀಗಿರುವಾಗ ಬೇರೆ ಮನೆಗೆ ಶಿಫ್ಟ್ ಆಗೋದು ಅಂದ್ರೆ ಸುಮ್ನೆ ಅಲ್ಲ. ನೀವೇನಾದ್ರು ಬೇರೆ ಮನೆಗೆ ಹೋಗಬೇಕು ಅಂದುಕೊಂಡಿದ್ರೆ ನಿಮ್ಮ ಜೇಬಿನಲ್ಲಿ ದುಡ್ಡು ಇಟ್ಟುಕೊಂಡಿರುವುದು ಒಳ್ಳೆಯದು.
ಇದೀಗ ದಂಪತಿ ಬೆಂಗಳೂರು (Bengaluru) ನಗರದಲ್ಲಿ 3 ಬಿ ಹೆಚ್ ಕೆ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲು ದಂಪತಿ ಬರೋಬ್ಬರಿ 2.53 ಲಕ್ಷ ರೂ ಖರ್ಚು ಮಾಡಿದ್ದಾರಂತೆ. ಈ ದಂಪತಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ದಂಪತಿ ಹೇಳಿದ್ದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಹೊಸ ಮನೆಗೆ ಶಿಫ್ಟ್ ಆದ ದಂಪತಿ
ಅನಾ ಮಿಶ್ರಾ (anamishraa) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೇರೆ ಮನೆಗೆ ಶಿಫ್ಟ್ ಆಗಲು ತಗುಲಿದ ಖರ್ಚು ವೆಚ್ಚದ ಬಗ್ಗೆ ಹೇಳಿದ್ದಾರೆ.
ಅದರ ಜತೆಗೆ ತನ್ನ ಗಂಡ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಅದಕ್ಕೆ ಖರ್ಚಾದ ಮೊತ್ತದ ಬಗ್ಗೆ ವಿವರಿಸಿದ್ದಾರೆ.
3 ಬಿಹೆಚ್‌ಕೆ ಅಪಾರ್ಟ್‌ಮೆಂಟ್‌ನ ಅಡ್ವಾನ್ಸ್ 1.5 ಲಕ್ಷ ರೂ
ಈ ವಿಡಿಯೋದಲ್ಲಿ, ದಕ್ಷಿಣ ಬೆಂಗಳೂರಿನಲ್ಲಿ ತಮ್ಮ ಹೊಸ 3 ಬಿ ಹೆಚ್ ಕೆ ಅಪಾರ್ಟ್‌ಮೆಂಟ್ ಗೆ ನೀಡಿದ ಅಡ್ವಾನ್ಸ್ ಯೇ 1.5 ಲಕ್ಷ ರೂ. ಮನೆಗೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಬ್ರೋಕರೇಜ್ ಶುಲ್ಕವಾಗಿ 37,000 ರೂ ಪಾವತಿಸಿದೆವು.
ಅದರ ಜತೆಗೆ ಒಂದು ತಿಂಗಳ ಬಾಡಿಗೆ 37,000 ರೂ ಆಗಿತ್ತು. ಬ್ರೋಕರ್ ಇಲ್ಲದೆಯೂ ಮನೆ ಹುಡುಕುವುದು ಕಷ್ಟಕರ. ಮನೆ ಹುಡುಕಾಟ ಜತೆಗೆ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹೀಗಾಗಿ ಬ್ರೋಕರ್ ಸಹಾಯ ಪಡೆಯಲು ನಿರ್ಧರಿಸಿದ್ದೆವು ಎಂದಿದ್ದಾರೆ.


