LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ : ತಾಯಿ - ಮಗನಿಂದ ಮಕ್ಮಲ್ ಟೋಪಿ

Advertisement

ಬೆಳಗಾವಿ :ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಜನರಿಗೆ ತಾಯಿ-ಮಗ ವಂಚನೆ ನಡೆಸಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಜನರು 133 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂಬುದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಚೇರಿಗಳನ್ನ ತೆರೆದಿದ್ದ ಆರೋಪಿಗಳು ನಂದಾ ಟ್ರೇಡರ್ಸ್, ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್‌ ಮತ್ತು ಸೆಲ್ಯೂಷನ್ ಪ್ರೈವೇಟ್‌ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಳ್ತಿದ್ರು ಎಂಬುದು ತಿಳಿದುಬಂದಿದೆ. ನಿಪ್ಪಾಣಿಯ ನಂದಾ ಪಾಟೀಲ್, ಪುತ್ರ ಪ್ರಸಾದ್ ಪಾಟೀಲ್‌ ಪ್ರಮುಖ ಆರೋಪಿಗಳಾಗಿದ್ದಾರೆ.

ನೀಲಣ್ಣನವರ ಜತೆ ಕೆಲಸ ಮಾಡಿದ್ದ ನಂದಾ ಪಾಟೀಲ್

1 ಲಕ್ಷ ರೂಪಾಯಿ ಹೂಡಿದ್ರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವ ಆಮಿಷವನ್ನು ಆರೋಪಿಗಳು ಹೂಡಿಕೆದಾರರಿಗೆ ಒಡ್ಡಿದ್ದರು. ಬಳಿಕ ಲಾಭಾಂಶ ಬಿಡಿ ಅಸಲು ಕೇಳಿದರೂ ಧಮ್ಕಿ ಹಾಕುತ್ತಿದ್ದರು.

ಮೊದಲು ಶಿವಾನಂದ ನೀಲಣ್ಣನವರ ಜತೆ ಕೆಲಸ ಮಾಡ್ತಿದ್ದ ನಂದಾ ಪಾಟೀಲ್, ವ್ಯವಹಾರಿಕ ಮನಸ್ತಾಪ ಬಳಿಕ ನಿಪ್ಪಾಣಿಯಲ್ಲಿ ಕಚೇರಿ ಓಪನ್‌ ಮಾಡಿದ್ದರು. 

ಹೂಡಿಕೆ ಹಣದಲ್ಲೇ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಳಗಾವಿ, ಪುಣೆ, ನಾಸಿಕ್ ಹಾಗೂ ಮುಂಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

ಇನ್ನು ಇವರ ಬಣ್ಣದ ಮಾತುನಂಬಿ ಹೂಡಿಕೆ ಮಾಡಿದವರ ಪೈಕಿ ಮಹಾರಾಷ್ಟ್ರದ‌ ನಾಸಿಕ್ ಜಿಲ್ಲೆಯ ಜನರೇ ಅತಿ ಹೆಚ್ಚು ಎಂಬುದು ಗೊತ್ತಾಗಿದೆ. ವಂಚನೆ ಸಂಬಂಧ ನಂದಾ, ಪ್ರಸಾದ್, ಸೌರಬ್ ಮಾಳಿ ಸೇರಿ 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೋಲಿಸ್ ಚೌಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೊಕದ್ದಮೆ ದಾಖಲಾಗುತ್ತಿದ್ದಂತೆ ಬಹುಕೋಟಿ ವಂಚಕರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಬೆಳಗಾವಿ SP ರಾಮರಾಜನ್ ವಿಶೇಷ ತಂಡ ರಚಿಸಿದ್ದಾರೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST