ಮೈಸೂರು : ನೂತನ ಸಚಿವರು ಪ್ರಮಾಣವಚನ ಸ್ವೀಕಾರಕ್ಕೆ ತುದಿಗಾಗಲಲ್ಲಿ ನಿಂತಿದ್ದು ಇನ್ನೂ ದೆಹಲಿಯಲ್ಲಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಇಂದು ಕಾಂಗ್ರೆಸ್ ಹೈಕಮಾ ನಾಯಕರಾದ ಜೊತೆಗೆ ಸಭೆ ನಡೆಸಲಿದ್ದು ಸಚಿವರ ಫೈನಲ್ ಲಿಸ್ಟ್ ರೆಡಿ ಆಗಲಿದೆ. ಹಾಗಾಗಿ ಕೆಲವೇ ದಿನಗಳಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ..
ಇನ್ನೂ ಈ ವಿಚಾರವಾಗಿ ಸಚಿವರ ಪಟ್ಟಿ ಇವತ್ತು ರಾತ್ರಿ ಫೈನಲ್ ಆಗಬಹುದು ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇಂದು ರಾತ್ರಿ ಹೈಕಮಾಂಡ್ ಜೊತೆ ಸಭೆ ಇದೆ ಹಾಗಾಗಿ ಎಲ್ಲವೂ ಹಿಂದೆ ತೀರ್ಮಾನ ಆಗುತ್ತದೆ. ಸಂಪುಟ ವಿಸ್ತರಣೆ ಯಾವಾಗ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಳಿಯೇ ಕೇಳಿ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


