ಸಿಂಧನೂರು : ಬಸನಗೌಡ ಫೌಂಡೇಶನ್ ವತಿಯಿಂದ ಸಿಂಧನೂರು ತಾಲೂಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 151 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 5,0001 ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಸ್ತ್ರೀಶಕ್ತಿಗೆ ಗೌರವ ಸಲ್ಲಿಸಲಾಯಿತು ಜೊತೆಗೆ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಶಾಸಕರಾಗಿ ಒಂದು ವರ್ಷ ಪೂರೈಸಿದ ಅವಧಿಯಲ್ಲಿ ಅವರು ಮಾಡಿದ ಜನಪರ ಸಾಧನೆಗಳ ಕೈಪಿಡಿ ಅನಾವರಣ ಗೊಳಿಸಲಾಯಿತು ನೆಚ್ಚಿನ ನಾಯಕ ಮಾನ್ಯ ಉಪ ಮುಖ್ಯಮಂತ್ರಿ , ಡಿ ಕೆ. ಶಿವಕುಮಾರ್ ಹಾಗೂ ಒಳಬಳ್ಳಾರಿ ಮತ್ತು ಯದ್ದಲದೊಡ್ಡಿಯ ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ನವ ಜೋಡಿಗೆ ಶುಭ ಹಾರೈಸಿದರು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಮಾತನಾಡಿ, ಬಸನಗೌಡ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಈ ಒಂದು ಕಾರ್ಯಕ್ರಮಕ್ಕೆ ಬಂದಿದ್ದು ಸಾಮಾನ್ಯವಾದ ಮಾತಲ್ಲಾ ಜನ ಸೇವೆಗಾಗಿ ಬಸನಗೌಡರ ಹೃದಯ ಮಿಡಿಯುತಲಿದೆ ಮುಂದಿನ ದಿನಮಾನಗಳಲ್ಲಿ ಅವರು ದೊಡ್ಡ ನಾಯಕನಾಗಿ ಬೆಳೆಯುವ ದಿನ ಸಮೀಪದಲ್ಲಿದೆ ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಅವರು ಮಾಡುವ ಜನಪರ ಕೆಲಸ ಕಾರ್ಯಗಳಿಗೆ ನಾವು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬಸನಗೌಡ ಬಾದರ್ಲಿ ಅವರ ಮೇಲೆ ಇರಲಿ ಎಂದರು.
ಈ ಸಂದರ್ಭದಲ್ಲಿ : ವಿಧಾನ ಸಭಾಪತಿ ,ಯು ಟಿ. ಖಾದರ್. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಸಚಿವರಾದ ಕೆ ಎಚ್. ಮುನಿಯಪ್ಪ. ಮಧು ಬಂಗಾರಪ್ಪ. ಈಶ್ವರ್ ಕಂಡ್ರೆ. ಆರ್ ಬಿ. ತಿಮ್ಮಾಪುರ. ಶಿವರಾಜ್ ತಂಗಡಗಿ. ಎನ್ ಎಸ್. ಬೋಸರಾಜ್. ಶಿವಾನಂದ ಪಾಟೀಲ್. ಶಾಸಕರಾದ ಬಸನಗೌಡ ತುರುವಿಹಾಳ. ಬಿ ಎಂ. ನಾಗರಾಜ್. ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ. ಡಿಎಸ್ ಹುಲಿಗೇರಿ. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಪುಟ್ಟಣ್ಣಯ್ಯ. ಮಹಮ್ಮದ್ ನೆಲಪಾಡ್. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ.ಖ್ಯಾತ ಚಲನಚಿತ್ರ ನಟರಾದ ಕಿಚ್ಚ ಸುದೀಪ್. ಸಾಧು ಕೋಕಿಲ್ ಸೇರಿದಂತೆ ಅನೇಕ ಗಣ್ಯರು ಮಾನ್ಯರು ಉಪಸ್ಥಿತರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.

