ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯ ಐಇಸಿ ಚಟುವಟಿಕೆಯಡಿ ವಿಬಿಜಿ ರಾಮ್ ಜಿ ಯೋಜನೆ ಹಾಗೂ ಜಾಬ್ ಕಾರ್ಡ್ ಮೇಳದ ಕುರಿತು ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಹೊಸ ಜಾಬ್ ಕಾರ್ಡಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಹೊಸ ರೋಜ್ಗಾರ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಲಾಯಿತು.
ಈ ಅಭಿಯಾನದಲ್ಲಿ ತಾಲೂಕ ಪಂಚಾಯತ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ ಸೆಪ್ಟೆಂಬರ್ 15 ರ ವರೆಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ (ಗ್ರಾಮೀಣ) ಯೋಜನೆಯಡಿ “ಜಾಬ್ ಕಾರ್ಡ ಮೇಳ” ವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಅರ್ಹ ಕುಟುಂಬಗಳು ಹಾಗೂ ವಿಶೇಷ ಸೌಲಭ್ಯಕ್ಕೆ ಒಳಪಡುವವರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡು ಹೊಸ ಉದ್ಯೋಗ ಚೀಟಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮುಂದುವರೆದು ಮಾತನಾಡಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿ ಕೆಲಸದ ಜೊತೆಗೆ ಕೃಷಿಹೊಂಡ, ದನದ ಶೆಡ್, ಕುರಿ. ಮೆಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಎಲ್ಲರೂ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಂಕರಗೌಡ ಹೊಸಮನಿ ಮಾತನಾಡಿ ಕೂಲಿ ಮೊತ್ತ 370 ರಿಂದ 382 ರೂ. ಗೆ ಹೆಚ್ಚಿಸಿದ್ದು, ವಾರ್ಷಿಕ ಮಾನವ ದಿನಗಳು 100 ರಿಂದ 125 ದಿನಗಳಿಗೆ ಹೆಚ್ಚಳವಾಗಿದ್ದು, ಇದರಿಂದ ವಾರ್ಷಿಕ 47750 ರೂಪಾಯಿವರೆಗೆ ಕೂಲಿ ಮೊತ್ತ ಬರುತ್ತದೆ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ನೂತನ ಯೋಜನೆಯಡಿ 318 ಕಾಮಗಾರಿಗಳು ಮಾಡಲು ಅವಕಾಶವಿದ್ದು, ವಿಬಿ-ಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು, ಸಮುದಾಯ ಕಾಮಗಾರಿಗಳು, ದಿನದ ಕೂಲಿ ಮೊತ್ತ, ಹಾಜರಾತಿ ಕ್ರಮ, ಕೆಲಸದ ಅವಧಿ, ರೋಜಗಾರ್ ಗ್ಯಾರಂಟಿ ಕಾರ್ಡ, ಕೂಲಿ ಪಾವತಿ ಕ್ರಮ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶಂಕರಗೌಡ ಹೊಸಮನಿ, ತಾಲೂಕ ಪಂಚಾಯತ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕರಾದ ಭೀಮಪ್ಪ ಗೊರನಾಳ, ಅನಿಲ ಹಕಾರಿ, ಗ್ರಾಪಂ ಸಿಬ್ಬಂದಿ ಆನಂದ ಲಮಾಣಿ, ಬಿಎಫ್ ಟಿ ಸಿದ್ದಪ್ಪ ಹನಸಿ, ಗ್ರಾಮಸ್ಥರು, ಕೂಲಿಕಾರರು ಇನ್ನಿತರರು ಉಪಸ್ಥಿತರಿದ್ದರು.


