ಕಲಘಟಗಿ : ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ನಾಮಕರಣಕ್ಕಾಗಿ ಕಲಘಟಗಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಸೆಪ್ಟೆಂಬರ 13, 2026 ರಂದು ಶ್ರೀ ಮೂರುಸಾವಿರ ಮಠದಿಂದ ನಡೆಯುವ ಟ್ಯಾಕ್ಟರ್ ಇಂಜಿನ್ ಮೂಲಕ ನೂರಾರು ಸಂಖ್ಯೆಯಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಕಲಘಟಗಿ ಉಸ್ತುವಾರಿಗಳು ಹಾಗೂ ಮಹದಾಯಿ ಮತ್ತು 5 ವಿಮಾನ ನಿಲ್ದಾಣಗಳ ನಾಮಕರಣ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಯಲ್ಲಪ್ಪ ಕುಂದಗೋಳ ಹೇಳಿದರು.
ಈಗಾಗಲೇ 2023 ಡಿಸೆಂಬರ 14 ನೇ ದಿನಾಂಕದಂದು ಉತ್ತರ ಕರ್ನಾಟಕದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಆಗಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ವಿಧಾನಸಭೆಯ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮಳ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕು.ವೆಂ.ಪು. ಅವರ ಹೆಸರು, ವಿಜಯಪೂರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರು ಹೀಗೆ ಸನ್ಮಾನ್ಯ ಸಂತೋಷ ಲಾಡ್ ರವರು ಎನ್. ಹೆಚ್. ಕೋನರಡ್ಡಿಯವರು, ಬಸವನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಹೆಚ್.ಕೆ. ಪಾಟೀಲ, ಶ್ರೀನಿವಾಸ ಮಾನೆ, ಎಂ.ಬಿ. ಪಾಟೀಲ ಹೀಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎಲ್ಲ ಸದಸ್ಯರು ಸೇರಿಕೊಂಡು ಈ ನಾಲ್ಕೂ ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರುಗಳನ್ನು ಮರುನಾಮಕರಣ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿ ಮೂರು ವರ್ಷಗಳು ಸಮೀಪಿಸಿದರೂ ಕೂಡಾ ಕೇಂದ್ರ ಸರಕಾರದ ಮಂತ್ರಿಗಳು ಈ ಬಗ್ಗೆ ಯಾವುದೇ ರೀತಿಯಿಂದ ಅನುಮೋದನೆಗೊಳಿಸದೇ ಕನ್ನಡಿಗರ ಬಗ್ಗೆ ಅಸಡ್ಡೆ ರೀತಿಯಿಂದ ವರ್ತಿಸುವುದು ಖಂಡನೀಯ. ಈ ಕುರಿತು ಸನ್ಮಾನ್ಯ ಜಗದೀಶ ಶೆಟ್ಟರ ರವರು ಕೇಂದ್ರ ಸರಕಾರದ ಸಿವಿಲ್ ಮಂತ್ರಿಗಳಾದ ಸನ್ಮಾನ್ಯ ರಾಮ ಮೋಹನ ನಾಯ್ಡು ಇವರಿಗೆ 3 ಪತ್ರಗಳನ್ನು ಕೊಟ್ಟರೂ ಸಹ ಇಲ್ಲಿಯವರೆಗೆ ನಿರ್ಧಾರ ತೆಗೆದುಕೊಳ್ಳದೇ ಕನ್ನಡಿಗರ ಬಗ್ಗೆ ಅಸಡ್ಡೆ ತೋರಿಸುತ್ತಿರುವ ಕೇಂದ್ರ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಪ್ರಹ್ಲಾದ ಜೋಶಿಯವರ ಕಾರ್ಯಾಲಯಕ್ಕೆ ಅಕ್ಟೋಬರ, 31, 2025 ರಂದು ಮೊದಲನೇ ಪತ್ರವನ್ನು ನೀಡಿದ್ದು ತದನಂತರ 2ನೇ ಪತ್ರವನ್ನು ಡಿಸೆಂಬರ, 27, 2025 ರಂದು ನೀಡಿದ್ದು 3ನೇ ಪತ್ರವನ್ನು ಮಾರ್ಚ 28, 2026 ರಂದು ನೀಡಿದ್ದು 4ನೇ ಪತ್ರವನ್ನು ಮೇ 30, 2026 ರಂದು ನೀಡಿದ್ದು ಇರುತ್ತದೆ. ಇಷ್ಟೆಲ್ಲ ಪತ್ರಗಳನ್ನು ಹತ್ತಾರು ಸಾವಿರ ಸಂಖ್ಯೆಯ ರ್ಯಾಲಿ ಮುಖಾಂತರ ಪತ್ರವನ್ನು ನೀಡಿದರೂ ಸಹ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಪ್ರಹ್ಲಾದ ಜೋಶಿಯವರ ಕಾರ್ಯ ವೈಖರಿಯನ್ನು ಧಾರವಾಡ ಜಿಲ್ಲೆ ಜನ ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಮತದಾರ ಪ್ರಭುಗಳು ಪ್ರಶ್ನಿಸುವಂತಾಗಿದೆ.
ಆದ್ದರಿಂದ ಕೇಂದ್ರ ಸರಕಾರಕ್ಕೆ ಮತ್ತೊಂದು ಎಚ್ಚರಿಕೆಯ ಸಾರ್ವಜನಿಕ ರ್ಯಾಲಿಯನ್ನು ಬರುವ ಸೆಪ್ಟೆಂಬರ 13, 2026 ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದು ಕಾರಣ, ನಮ್ಮ ಕಲಘಟಗಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ ಇಂಜಿನ್‌ಗಳ ಮೂಲಕ ಪಾಲ್ಗೊಳ್ಳಲು ನಿರ್ದರಿಸಿದ್ದೇವೆ ಎಂದು ಹೋರಾಟದ ಮುಂದಾಳತ್ವ ವಹಿಸಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ ಮುತ್ತಣ್ಣವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ ಸಾ ಪ ತಾಲೂಕ ಅಧ್ಯಕ್ಷ ರಮೇಶ್ ಸೋಲಾರಗೊಪ್ಪ,ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಂಜುನಾಥ್ ಮಾಳಗಿ, ಶಂಕರ್ ದಾಸನಕೊಪ್ಪ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಬೃಹತ್ ಹೋರಾಟ
ಕಲಘಟಗಿ: ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ನಾಮಕರಣಕ್ಕಾಗಿ ಕಲಘಟಗಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಸೆಪ್ಟೆಂಬರ 13, 2026 ರಂದು ಶ್ರೀ ಮೂರುಸಾವಿರ ಮಠದಿಂದ ನಡೆಯುವ ಟ್ಯಾಕ್ಟರ್ ಇಂಜಿನ್ ಮೂಲಕ ನೂರಾರು ಸಂಖ್ಯೆಯಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಕಲಘಟಗಿ ಉಸ್ತುವಾರಿಗಳು ಹಾಗೂ ಮಹದಾಯಿ ಮತ್ತು 5 ವಿಮಾನ ನಿಲ್ದಾಣಗಳ ನಾಮಕರಣ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಯಲ್ಲಪ್ಪ ಕುಂದಗೋಳ ಹೇಳಿದರು.