ಮಾನ್ವಿ: ನವಗ್ರಹಗಳಾದ ಸೂರ್ಯನಿಗೆ ಎಕ್ಕೆ ಗಿಡ, ಚಂದ್ರನಿಗೆ ಮುತ್ತುಗದ ಮರ, ಬುಧನಿಗೆ ಉತ್ತರಾಣಿ,ಅಂಗಾರಕನಿಗೆ ಕಗ್ಗಲಿಮರ,ಗುರುವಿಗೆಅಶ್ವತ್ಥಮರ, ಶುಕ್ರನಿಗೆ ಅತ್ತಿಮರ, ಶನಿಗೆ ಬನ್ನಿಮರ,ರಾಹುವಿಗೆ ಗರಿಕೆ ಹುಲ್ಲು,ಕೇತುವಿಗೆ ದರ್ಭೆಗಿಡಗಳು ಪ್ರತಿಕವಾಗಿರುತ್ತವೆ ನಿತ್ಯ ನಾವು ನವಗ್ರಹ ವನದಲ್ಲಿನ ನವಗ್ರಹ ಗಿಡಗಳನ್ನು ಪೂಜಿಸುವುದರಿಂದ ನವಗ್ರಹ ದೋಷಗಳು ಕಳೆದು ಉತ್ತಮ ಫಲಗಳು ಪ್ರತಿಯೊಬ್ಬರಿಗೂ ದೊರೆಯುತ್ತದೆ ಎಂದು ತಿಳಿಸಿದರು.
ಪಟ್ಟಣದ ವಿಜಯನಗರ ಕಾಲೋನಿಯಲ್ಲಿ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ಹಾಗೂ ಸಮತ್ವ ಯೋಗ ಮಂದಿರ ಬೆಂಗಳೂರು ವತಿಯಿಂದ ನಡೆದ ನವಗ್ರಹ ಯೋಗವನದಲ್ಲಿ ನವಗ್ರಹ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಮತ್ವ ಯೋಗ ಮಂದಿರ ಬೆಂಗಳೂರಿನ ಯೋಗ ಗುರು ನಂದಿನಿ ಶ್ರೀಶ ರವರು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ನಮ್ಮ ಯೋಗ ಪರಂಪರೆಯಲ್ಲಿ ಯೋಗ,ಧ್ಯಾನ ಸೇರಿದಂತೆ ನವಗ್ರಹ ವನಕ್ಕೆ ವಿಶೇಷವಾದ ಸ್ಥನವನ್ನು ನೀಡಲಾಗಿದೆ ಇದರಲ್ಲಿ ವೈಜ್ಞಾನಿಕವಾದ ಹಿನ್ನೆಲೆ ಕೂಡ ಇದೆ ಒಂದು ಮರ ನೂರು ಮನುಷ್ಯರಿಗೆ ಸಮಾನವಾಗಿರುತ್ತದೆ ಮರಗಿಡಗಳನ್ನು ಬೆಳೆಸುವುದರಿಂದ ಪರಿಸರವು ಉಳಿಯುತ್ತದೆ,ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಪ್ರಕೃತಿ ಮನುಷ್ಯರಿಗೆ ಬದುಕುವುದಕ್ಕೆ ಅಗತ್ಯವಾದ ಎಲ್ಲಾವನ್ನು ನೀಡುತ್ತದೆ ಅದರಂತೆ ನಾವೇಲ್ಲರು ಕೂಡ ನಮ್ಮ ಜೀವಿತಾವಧಿಯಲ್ಲಿ ಕಡ್ಡಾಯವಾಗಿ ನೂರು ಮರಗಿಡಗಳನ್ನಾದರು ಬೆಳೆಸಿ ಉಳಿಸಬೇಕು ಎಂದು ಕರೆ ನೀಡಿದರು.
ನವಗ್ರಹ ಯೋಗವನದಲ್ಲಿ ನವಗ್ರಹ ಸಸಿಗಳನ್ನು ನೆಡಲಾಯಿತು.
ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ನ ಅನುದಾನಯ್ಯ ಸ್ವಾಮಿ, ಮಾಜಿ ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ದೇವಿಕ ನಾಗರಾಜ್ , ತ್ರಯಂಬಕೇಶ ಮೇಧಾ.ಮರೆಗೌಡ ಹಾಗೂ ಟ್ರಸ್ಟಿನ ಸದಸ್ಯರಾದ ಗೌರಮ್ಮ ಮಹಾಂತಯ್ಯ ಸೇರಿದಂತೆ ಇನ್ನಿತರರು ಇದ್ದರು.
ವರದಿ :ಆಂಜನೇಯ ನಸಲಾಪುರ


