LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೌನೇಶ ದೈಹಿಕ ಶಿಕ್ಷಕ ವಯೋ ನಿವೃತ್ತಿ ಬೀಳ್ಕೊಡುಗೆ: ಮೌನ ಮಿತ್ರ ಯೋಗ ಸಮಿತಿಯಿಂದ ಸನ್ಮಾನ

Advertisement

ಮಾನ್ವಿ: ಪಟ್ಟಣದ ಸರ್ಕಾರಿ ಹಣ್ಣಿನ ತೋಟದಲ್ಲಿ ಮೌನ ಮಿತ್ರ ಯೋಗ ಸಮಿತಿ, ಮಾನ್ವಿ ವತಿಯಿಂದ ಮೌನೇಶ ಪೋತ್ನಾಳ್ ದೈಹಿಕ ಶಿಕ್ಷಕ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮೌನೇಶ ದೈಹಿಕ ಶಿಕ್ಷಕ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮೌನೇಶ ದೈಹಿಕ ಶಿಕ್ಷಕರ ಬಾಲ್ಯ ಜೀವನ, ವಿದ್ಯಾಭ್ಯಾಸ ಹಾಗೂ ಸುದೀರ್ಘ ಶ್ರಮದ ಜೀವನದ ಕುರಿತು  ಸಿದ್ದಮಲ್ಲಯ್ಯ ಹಿರೇಮಠ ಅವರು ಕಿರು ಪರಿಚಯ ನೀಡಿದರು.
ಹಿರಿಯರಾದ ಶ್ರೀಶೈಲ ಗೌಡ್ರು ಅವರು ಮೌನೇಶ  ಅವರ ಯೋಗ ಕ್ಷೇತ್ರದ ಸಾಧನೆ ಹಾಗೂ ಸೇವೆಯನ್ನು ಕುರಿತು ಮಾತನಾಡಿದರು. ಶಂಕರನಂದ  ಅವರು ತಮ್ಮ ಯೋಗಾಭ್ಯಾಸದ ಅನುಭವಗಳನ್ನು ಹಂಚಿಕೊಂಡು,ಯೋಗದಿದ ತಮ್ಮ ಜೀವನದಲ್ಲಿ ಉಂಟಾದ ಪ್ರಯೋಜನಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗಣ್ಯರು ಯೋಗದ ಮಹತ್ವ ಹಾಗೂಯೋಗಾಭ್ಯಾಸದಿದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಕುರಿತು ಮಾತನಾಡಿದರು. ಮಾಜಿ ಸೈನಿಕರಾದ ಅಮರೇಶ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೀಡುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಸನ್ಮಾನಿತ ಮೌನೇಶ ದೈಹಿಕ ಶಿಕ್ಷಕ ದಂಪತಿಗಳನ್ನು ಸಾರೋಟಿನಲ್ಲಿ ಮಾನ್ವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ನಾಗರಾಜು ಜಿ ಅವರು ನೆರವೇರಿಸಿದರು. ಮೌನ ಮಿತ್ರ ಯೋಗ ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  ವಿಜಯಕುಮಾರ ಶಿಕ್ಷಕ ನಿರೂಪಿಸಿದರು. ಶಂಕ್ರಯ್ಯ ವಂದಿಸಿದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮಿಬಿಯಾ ವಿರುದ್ಧ ದ. ಆಪ್ರಿಕಾಗೆ 99 ರನ್ ಗಳ ವಿಜಯಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ: ಬೆಂಬಲಿಗರಿಂದ ಬೃಹತ್ ಪ್ರತಿಭಟನೆ2,186 ಕೋಟಿ ಅನುದಾನ ತಡೆ: ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮೊದಲ ದಿನವೇ ಇನ್ನಿಂಗ್ಸ್ ಲೀಡ್ ಇಂದು ಭಾರತ -ಶ್ರೀಲಂಕಾ ಮೊದಲ ಸೆಮಿ ಪೈನಲ್ ಜೆಪಿ ಆಂಗ್ಲ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆಒಂದೇ ಮನೆಯಲ್ಲಿ ಇಬ್ಬರು ಪತ್ನಿಯರ ಜೊತೆ ಸಂಸಾರ : ಈಗ 3ನೇ ಮಹಿಳೆ ಜತೆ ಪತಿ ಪರಾರಿಕರೆ ಸ್ವೀಕರಿಸಿಲ್ಲ ಎಂದು ಮನನೊಂದು ಲವ್ವರ್'ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ಆತ್ಮಹತ್ಯೆವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಬೃಹತ್ ಹೋರಾಟವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಬೃಹತ್ ಹೋರಾಟ