LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸರ್ಕಾರದ ವಿರುದ್ಧ ಗೋವಿಂದ ಕಾರಜೋಳ ವಾಗ್ದಾಳಿ

Advertisement

​ಪಾವಗಡ :  (ವಿಶೇಷ ವರದಿ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡದೆ, ಬರೀ ಮೊಸದಾಟದ ಮೂಲಕವೇ ಆಡಳಿತ ನಡೆಸುತ್ತಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರಜೋಳ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

​ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕರು ಹಾಗೂ ಮೈತ್ರಿಕೂಟದ ಪ್ರಮುಖ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ತಾಲ್ಲೂಕಿನಲ್ಲಿ ಸೃಷ್ಟಿಯಾಗಿರುವ ಭೀಕರ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

​ಸುದ್ದಿಗೋಷ್ಠಿಯ ಪ್ರಮುಖ ಮುಖ್ಯಾಂಶಗಳು:

​ಅಪೂರ್ಣ ಯೋಜನೆಯ ಬಾಗಿನ ಅರ್ಪಣೆ: ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹11,000 ಕೋಟಿ ಅನುದಾನ ನೀಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೇವಲ ₹1,300 ಕೋಟಿ ಬಿಡುಗಡೆ ಮಾಡಿ ಕಾಮಗಾರಿಯನ್ನು ಕುಂಟಿತಗೊಳಿಸಿದೆ. 

ಕನಿಷ್ಠ ಕೆನಾಲ್, ಪೈಪ್‌ಲೈನ್ ಹಾಗೂ ಮೋಟಾರ್‌ಗಳನ್ನು ಅಳವಡಿಸದೇ, ಹಿರಿಯೂರು ಮತ್ತು ಪಾವಗಡ ಭಾಗದಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದರೂ ಬಾಗಿನ ಅರ್ಪಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.

​ಭೀಕರ ಬರ ಮತ್ತು 70 ಸಾವಿರ ಜನರ ಗುಳೆ: ರಾಜ್ಯದಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರೂ ಸರ್ಕಾರ ಬಿಳಿ ಹಾಳೆಯ ಮೇಲೆ ಬರ ಘೋಷಣೆ ಮಾಡಿ ಕೈತೊಳೆದುಕೊಂಡಿದೆ.

 ಪಾವಗಡ ತಾಲ್ಲೂಕಿನ ಒಂದೇ ಭಾಗದಿಂದ ಸುಮಾರು 70,000 ಬಡವರು, ರೈತರು ಹಾಗೂ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬೆಂಗಳೂರು, ಬಳ್ಳಾರಿ, ಬೆಳಗಾವಿ ಹಾಗೂ ಹೈದರಾಬಾದ್‌ಗೆ ಗುಳೆ ಹೋಗುತ್ತಿದ್ದಾರೆ.
​ದಲಿತರ ರಕ್ಷಣೆಯಲ್ಲಿ ಸರ್ಕಾರ ವಿಫಲ..

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ಕೊಲೆ, ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದು, ಎಸ್.ಸಿ/ಎಸ್.ಟಿ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕವು ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಆರೋಪಿಸಿದರು.

​ಜೆಜೆಎಂ ಹಾಗೂ ತುಂಗಭದ್ರ ಕುಡಿಯುವ ನೀರು ಯೋಜನೆ ಅಪೂರ್ಣ: ₹2,352 ಕೋಟಿ ವೆಚ್ಚದಲ್ಲಿ ತುಂಗಭದ್ರ ನೀರು ತಂದರೂ ಜಲ ಜೀವನ್ ಮಿಷನ್ (JJM) ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಪೂರ್ಣಗೊಂಡ ಕಡೆ ವಿದ್ಯುತ್ ಪೂರೈಕೆಯಿಲ್ಲ. ಹಿಂದೆ ತಾವು ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ಎಕ್ಸ್‌ಪ್ರೆಸ್ ಫೀಡರ್ ಲೈನ್ ವ್ಯವಸ್ಥೆಗೆ ಆದೇಶಿಸಿದ್ದರೂ, ಈ ಸರ್ಕಾರಕ್ಕೆ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

​ಮೈತ್ರಿ ನಾಯಕರ ಆಗ್ರಹಗಳು:
​ಬರ ಪರಿಹಾರ ಬಿಡುಗಡೆ: ಪ್ರತಿ ಜಿಲ್ಲೆಗೆ ಕನಿಷ್ಠ ₹100 ಕೋಟಿ ಬರ ಪರಿಹಾರ ಅನುದಾನ ತಕ್ಷಣ ಬಿಡುಗಡೆ ಮಾಡಬೇಕು.
​ಗೋಶಾಲೆ ಮತ್ತು ಮೇವು ಬ್ಯಾಂಕ್: ಜಾನುವಾರುಗಳಿಗೆ ತಕ್ಷಣವೇ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ಆರಂಭಿಸಬೇಕು.
​ಫಸಲ್ ಭೀಮಾ ಪರಿಹಾರ: ಸರ್ಕಾರ ₹100 ಕೋಟಿ ಪ್ರೀಮಿಯಂ ಪಾವತಿಸಿದರೆ ರೈತರಿಗೆ ₹700 ಕೋಟಿ ಬೆಳೆ ಪರಿಹಾರ ಸಿಗಲಿದೆ. ಆ ಕೆಲಸವನ್ನು ತಕ್ಷಣ ಮಾಡಬೇಕು.

​ಸ್ಥಳೀಯ ಕೆಲಸ: ಸ್ಥಳೀಯವಾಗಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುಳೆ ಹೋಗುವುದನ್ನು ತಪ್ಪಿಸಬೇಕು.

​ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಜಿ.ಪಂ. ಮಾಜಿ ಸದಸ್ಯ ಆರ್.ಸಿ. ಅಂಜಿನಪ್ಪ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ.ಜಿ. ವೆಂಕಟರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಪಾವಗಡ ರವಿ, ತಾಲ್ಲೂಕು ಅಧ್ಯಕ್ಷ ಅಶೋಕ್, ನಾಯಕರಾದ ಗೌಡೇಟಿ ಪ್ರಭಾಕರ್, ಶಾರದಾ ಬಾಯಿ, ಯುವಮೋರ್ಚಾದ ಮಂಜುನಾಥ್, ಹರೀಶ್ ನಾಯ್ಕ್ ಸೇರಿದಂತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಶಿವಾನಂದ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ